Tuesday, May 21, 2024
Homeಕರಾವಳಿಮಂಗಳೂರಲ್ಲಿ ಎಸಿಬಿ ದಾಳಿ ಪ್ರಕರಣ : ಎಸಿಬಿ ದಾಳಿಯ ಸಂಪೂರ್ಣ ಮಾಹಿತಿ ಲಭ್ಯ

ಮಂಗಳೂರಲ್ಲಿ ಎಸಿಬಿ ದಾಳಿ ಪ್ರಕರಣ : ಎಸಿಬಿ ದಾಳಿಯ ಸಂಪೂರ್ಣ ಮಾಹಿತಿ ಲಭ್ಯ

spot_img
- Advertisement -
- Advertisement -

ಮಂಗಳೂರು: ರಾಜ್ಯದ 9 ಭ್ರಷ್ಟ ಅಧಿಕಾರಿಗಳಿಗೆ ಇಂದು ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧ ಭ್ರಷ್ಟಾಚಾರ ನಿಗ್ರಹ ದಳ(ACB)ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ ಜಿಲ್ಲಾ ನಗರಭಿವೃದ್ಧಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಅಗಿರುವ ಜಿ.ಶ್ರೀಧರ್ ಅವರಿಗೆ ಸೇರಿದ ನಾಲ್ಕು ಭಾಗದಲ್ಲಿರುವ ಮಂಗಳೂರಿನಲ್ಲಿರುವ ಬಾಡಿಗೆ ಮನೆ, ಮಂಗಳೂರು ಕಛೇರಿ, ತಂದೆ ಮನೆಯಾದ ಮಂಡ್ಯದ ಕೆ.ಆರ್.ಪೇಟೆ, ಮೈಸೂರಿನಲ್ಲಿ ಸ್ವಂತ ಮನೆ (ಈಗ ಬಾಡಿಗೆ ಕೊಟ್ಟಿದ್ದಾರೆ) ಸೇರಿ ರಾಜ್ಯದ ವಿವಿಧ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮಂಗಳೂರಲ್ಲಿ ದಾಳಿ ವೇಳೆ ಪತ್ತೆಯಾದ ವಿವರಗಳು :
ಮಂಗಳೂರಿನಲ್ಲಿ ದಾಳಿ ವೇಳೆ 13 ಲಕ್ಷ ಮೌಲ್ಯದ 920 ಗ್ರಾಂ ಚಿನ್ನ , 90,000 ಮೌಲ್ಯದ 3.5 ಕೆ.ಜಿ ಬೆಳ್ಳಿ, ಒಂದು ಬೆಲೊನಾ ಕಾರು , ಒಂದು ಬುಲೆಟ್ ಬೈಕ್ ಹಾಗೂ ಬೆಂಗಳೂರು, ಹಾಸನದ ಬೆಲೂರು, ಮೈಸೂರು ಸೇರಿ ಮೂರು ಕಡೆ 30/40 ಸೈಟಿನ ದಾಖಲೆ ಪತ್ರಗಳು ಪತ್ತೆಯಾಗಿದೆ. ದಾಳಿ ವೇಳೆ ಯಾವುದೇ ಹಣ ಪತ್ತೆಯಾಗಿಲ್ಲ. ಇನ್ನೂ ಎಸಿಬಿ ಅಧಿಕಾರಿಗಳು ಆಕ್ರಮಗಳಿಂದ ಸಂಪಾದಿಸಿದ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕಾಗಿದೆ. ಕಾರ್ಯಾಚರಣೆಯಲ್ಲಿ ಮಂಗಳೂರು ಎಸಿಬಿ ಡಿವೈಎಸ್ಪಿ ಕೆ.ಸಿ.ಪ್ರಕಾಶ್, ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ,ಇನ್ಸ್ಪೆಕ್ಟರ್ ಗುರುರಾಜ್ ಮತ್ತು ಸಿಬ್ಬಂದಿಗಳಾದ ಹರಿಪ್ರಸಾದ್, ರಾಧಕೃಷ್ಣ.ಡಿ.ಎ, ರಾಧಕೃಷ್ಣ.ಕೆ, ಅದರ್ಶ್ , ಗಂಗಣ್ಣ , ವೈಶಾಲಿ ಮತ್ತು ಚಾಲಕ ರಾಕೇಶ್ ಪಾಲ್ಗೊಂಡಿದ್ದರು.

- Advertisement -
spot_img

Latest News

error: Content is protected !!