Friday, June 5, 2026
Homeಕರಾವಳಿಹೆರಿಗೆ ವೇಳೆ ರಕ್ತಸ್ರಾವವಾಗಿ ಕಡಬದ ಮಹಿಳೆ ಸಾವು: ಹುಟ್ಟತ್ತಲೇ ಅನಾಥವಾದ ಅವಳಿ ಮಕ್ಕಳು

ಹೆರಿಗೆ ವೇಳೆ ರಕ್ತಸ್ರಾವವಾಗಿ ಕಡಬದ ಮಹಿಳೆ ಸಾವು: ಹುಟ್ಟತ್ತಲೇ ಅನಾಥವಾದ ಅವಳಿ ಮಕ್ಕಳು

- Advertisement -
- Advertisement -

ಕಡಬ: ಹೆರಿಗೆ ವೇಳೆ ರಕ್ತಸ್ರಾವವಾಗಿ ಕಡಬ ಮೂಲದ ಮಹಿಳೆ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಲೇಡಿ ಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ.

ಕಡಬ ತಾಲೂಕಿನ ಕೊಂಬಾರು ಇಡ್ಯಡ್ಕ ಕಟ್ಟೆ ನಿವಾಸಿ ವಿದ್ಯಾ (30) ಮೃತ ರ್ದುದೈವಿ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿದ್ಯಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಈ ವೇಳೆ ಅಧಿಕ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ.

ಮೃತ ಮಹಿಳೆಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಇದೀಗ ಅವಳಿ ಮಕ್ಕಳಿಗೆ ಜನ್ಮ ನೀಡಿ ಉಸಿರು ಚೆಲ್ಲಿದ್ದಾರೆ. ನವಜಾತ ಅವಳಿ ಮಕ್ಕಳು ಆರೋಗ್ಯವಾಗಿವೆ.

- Advertisement -

Latest News

error: Content is protected !!