Thursday, June 4, 2026
Homeಕರಾವಳಿಸುಳ್ಯದಲ್ಲಿ ಬಾಲ್ಯ ವಿವಾಹವನ್ನು ತಡೆದ ಅಧಿಕಾರಿಗಳು

ಸುಳ್ಯದಲ್ಲಿ ಬಾಲ್ಯ ವಿವಾಹವನ್ನು ತಡೆದ ಅಧಿಕಾರಿಗಳು

- Advertisement -
- Advertisement -

ಸುಳ್ಯ: ಸಿ .ಡಿ.ಪಿ.ಒ. ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಬಾಲ್ಯವಿವಾಹವೊಂದನ್ನು ತಡೆದ ಘಟನೆ ದುಗಲಡ್ಕ ಕಂದಡ್ಕದಲ್ಲಿ ನಡೆದಿದೆ.

ಕಂದಡ್ಕದ ತಮಿಳು ಕುಟುಂಬವೊಂದರ 26 ವರ್ಷದ ಯುವಕನಿಗೆ ಇಂದು ಮೈಸೂರಿನ ಹುಡುಗಿಯೊಂದಿಗೆ ಮದುವೆ ನಡೆಯುವುದಿತ್ತು. ಈ ಹುಡುಗಿಗೆ 18 ವರ್ಷ ಆಗಿಲ್ಲ ಎಂದು ಜು.14 ರಂದು ಸಂಜೆ ಸಿ.ಡಿ.ಪಿ.ಒ.ರವರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಸಿ.ಡಿ.ಪಿ.ಒ. ರಶ್ಮಿ ಅಶೋಕ್ ಅವರು ಇಲಾಖೆಯ ಮೇಲ್ವಿಚಾರಕಿ ಹಾಗೂ ಸಹಾಯಕ ಮಕ್ಕಳ ಸಂರಕ್ಷಣಾಧಿಕಾರಿ ದೀಪಿಕಾ, ಗ್ರಾಮ ಕರಣಿಕ ತಿಪ್ಪೇಶ್, ನಾಲ್ಕು ಮಂದಿ ಪೊಲೀಸರ ಜತೆಗೆ ಕಂದಡ್ಕಕ್ಕೆ ಭೇಟಿ ನೀಡಿದ್ದಾರೆ.

ಮದುವೆಗೆ ಹುಡುಗಿ ಕಡೆಯವರು ಮೈಸೂರಿನಿಂದ ಆಗಮಿಸಿದ್ದರು. ಅವರ ಜೊತೆ ವಿಚಾರಿಸಿದಾಗ ಹುಡುಗಿಗೆ 18 ವರ್ಷ ತುಂಬಿರುವ ಬಗ್ಗೆ ದಾಖಲೆ ಸಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲವೆಂದು ಗೊತ್ತಾಗಿದೆ. ಬಳಿಕ ಅಧಿಕಾರಿಗಳು ಬಾಲ್ಯವಿವಾಹದ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!