- Advertisement -
- Advertisement -
ಬೆಳ್ಮಣ್: ಬೆಳ್ಮಣ್ ಪೇಟೆಯ ಬಸ್ ನಿಲ್ದಾಣ ಮಟ್ಕಾ ಜೂಜಾಟಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದ ಆರೋಪಿಯನ್ನು ಗ್ರಾಮಾಂತರ ಎಸೈ ತೇಜಸ್ವಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆಜಮಾಡಿಯ ಸುಂದರ ಸಲ್ಯಾನ್(65) ಎಂದು ಗುರುತಿಸಲಾಗಿದೆ. ತನ್ನ ಸ್ವಂತ ಲಾಭಕ್ಕಾಗಿ 1ರೂ.ಗೆ 70 ರೂಪಾಯಿ ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಜೂಜಾಟವಾಡುವಂತೆ ಪ್ರಚೋದಿಸುತ್ತಿದ್ದು, ಸಾರ್ವಜನಿಕರಿಂದ ಸಂಗ್ರಹಿಸಿದ ರೂ.950, ಮಟ್ಕಾ ಬರೆದ ಚೀಟಿ ಹಾಗೂ ಬಾಲ್‌ಪೆನ್‌ನ್ನು ಪೊಲೀಸರು ವಶಪಡಿಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -