Tuesday, June 30, 2026
Homeಅಪರಾಧಬೆಳ್ತಂಗಡಿ : ಪುದುವೆಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರಿಂದ ದಾಳಿ

ಬೆಳ್ತಂಗಡಿ : ಪುದುವೆಟ್ಟಿನಲ್ಲಿ ಅಕ್ರಮ ಮದ್ಯ ಮಾರಾಟ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರಿಂದ ದಾಳಿ

- Advertisement -
- Advertisement -

ಬೆಳ್ತಂಗಡಿ : ಅಕ್ರಮವಾಗಿ ಮಧ್ಯ ಸಂಗ್ರಹಿಸಿ ಮನೆಯ ತೋಟದಲ್ಲಿ ಶೇಖರಿಟ್ಟು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಮದ್ಯದ ಅಡ್ಡೆ ಮೇಲೆ ಧರ್ಮಸ್ಥಳ ಪೊಲೀಸರು ದಾಳಿ ಮಾಡಿ ಮದ್ಯ ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಬೆಳ್ಮನಾರು ನಿವಾಸಿ ಪುರುಷೋತ್ತಮ ಎಂಬಾತನ ಮನೆಯ ತೋಟದಲ್ಲಿ ಅಕ್ರಮವಾಗಿ ಮಾರಾಟ ಮಾಡಲು ಮದ್ಯ ಸಂಗ್ರಹಿಸಿಟ್ಟ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಜೂ.16 ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೇರ ಮತ್ತು ಸಿಬ್ಬಂದಿ ಪುರುಷೋತ್ತಮ ಎಂಬಾತನ ಮನೆಗೆ ತೋಟದ ಮೇಲೆ ದಾಳಿ ಮಾಡಿ 4.860 ಲೀಟರ್ 54 ಸ್ಯಾಚೆಟ್ 90 ಎಂ.ಎಲ್ ಮೈಸೂರು ಲ್ಯಾನ್ಸರ್ ವಿಸ್ಕಿ ಮದ್ಯ ವಶಪಡಿಸಿಕೊಂಡಿದ್ದಾರೆ. ಇದರ ಅಂದಾಜು ಮೌಲ್ಯ 2,700 ರೂಪಾಯಿ ಅಗಿದ್ದು. ಈ ಮದ್ಯ ಮರಾಟಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿರುವುದರಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬಾಳ್ಮನಾರು ನಿವಾಸಿ ಕೊರಗಪ್ಪ ಪೂಜಾರಿ ಮಗ ಪುರುಷೋತ್ತಮ(40) ಎಂಬಾತನನ್ನು ಬಂಧಿಸಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!