Monday, June 8, 2026
Homeಕರಾವಳಿಕಡಬ: ನೀರುಪಾಲಾದ ಯುವಕನ ಮೃತದೇಹ ಉಪ್ಪಿನಂಗಡಿಯಲ್ಲಿ ಪತ್ತೆ!

ಕಡಬ: ನೀರುಪಾಲಾದ ಯುವಕನ ಮೃತದೇಹ ಉಪ್ಪಿನಂಗಡಿಯಲ್ಲಿ ಪತ್ತೆ!

- Advertisement -
- Advertisement -

ಕಡಬ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಿನ್ನೆ ಕೆಮ್ಮಾರ ಕುಮಾರಧಾರ ನದಿಯಲ್ಲಿ ನೀರುಪಾಲಾಗಿರುವ ಯುವಕನ ಶವ ಇಂದು ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ.

ಯುವಕನನ್ನು ಸ್ಥಳೀಯ ನಿವಾಸಿ ಶಫೀಕ್(19) ಎಂದು ಗುರುತಿಸಲಾಗಿದ್ದು, ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿತ್ತು. ನೀರಿನಲ್ಲಿ ಕಣ್ಮರೆಯಾಗಿದ್ದವನನ್ನು ಸತತ ಹುಡುಕಾಟದ ಬಳಿಕ ಉಪ್ಪಿನಂಗಡಿ ನೇತ್ರಾವತಿ ಸೇತುವೆಯ ಕೆಳಗೆ ಗುರುವಾರ ಪತ್ತೆಯಾಗಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಸ್ಥಳೀಯ ಈಜುಗಾರರು, ಯುವಕರು ಶಫೀಕ್ ಗಾಗಿ ಹುಡುಕಾಟ ನಡೆಸಿದ್ದರು.

- Advertisement -

Latest News

error: Content is protected !!