Friday, June 27, 2025
Homeತಾಜಾ ಸುದ್ದಿಜೆಸಿಬಿಯಿಂದ ಬೆನ್ನು ತುರಿಕೆಯನ್ನು ಉಜ್ಜಿಸಿಕೊಂಡ ವ್ಯಕ್ತಿ: ವಿಡಿಯೋ ವೈರಲ್

ಜೆಸಿಬಿಯಿಂದ ಬೆನ್ನು ತುರಿಕೆಯನ್ನು ಉಜ್ಜಿಸಿಕೊಂಡ ವ್ಯಕ್ತಿ: ವಿಡಿಯೋ ವೈರಲ್

spot_img
- Advertisement -
- Advertisement -

ಮಹಾ ಎಕ್ಸ್‌ಪ್ರೆಸ್: ನಮಗೆ ಬೆನ್ನು ತುರಿಸುತ್ತಿದ್ದರೆ ಸಾಮಾನ್ಯವಾಗಿ ನಾವು ಬಟ್ಟೆಯಿಂದ ಅಥವಾ ಕೈಗೆ ಸಿಗುವ ಸಣ್ಣ ವಸ್ತುಗಳ ಸಹಾಯದಿಂದ ನಾವು ತುರಿಕೆಯನ್ನು ಶಮನ ಮಾಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ಈ ವಿಷಯದಲ್ಲಿ ಎಲ್ಲರಿಗಿಂತ ಭಿನ್ನ ಎಂದು ಸಾಬೀತು​ ಮಾಡಿದ್ದಾರೆ.

ತಮ್ಮ ಜಾಗದಲ್ಲಿ ಕೆಲಸ ಮಾಡುತ್ತಿರುವಾಗ ಬೆನ್ನಿನಲ್ಲಿ ತುರಿಕೆ ಉಂಟಾಯಿತು ಎಂದು ಅಲ್ಲೇ ಪಕ್ಕದಲ್ಲಿ ಮಣ್ಣಿನ ಕೆಲಸ ಮಾಡುತ್ತಿದ್ದ ಬಾರಿ ಗಾತ್ರದ ಜೆಸಿಬಿಯಿಂದ ತಮ್ಮ ಬೆನ್ನು ತುರಿಸಿಕೊಂಡಿದ್ದಾರೆ.

ಹೌದು, ಸುಮಾರು 40 ಸೆಕೆಂಡ್ ಗಳ ವಿಡಿಯೋ ಒಂದು ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಸದ್ಯ ನೆಟ್ಟಿಗರನ್ನು ನಗೆ ಗಡಲಿನಲ್ಲಿ ತೇಲಿಸುತ್ತಿದೆ.

ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಬೆನ್ನು ತುರಿಸಿಕೊಳ್ಳುವ ಸಲುವಾಗಿ ಜೆಸಿಬಿ ಮುಂದೆ ಬಾಗಿ ನಿಲ್ಲುತ್ತಾರೆ. ಇದಕ್ಕೆ ಪ್ರತಿಯಾಗಿ ಜೆಸಿಬಿಯ ಡ್ರೈವರ್​​ ಕೂಡ ಜೆಸಿಬಿಯ ಸೊಂಡಿಲಿನ ಹಲ್ಲುಗಳನ್ನು ಬಳಸಿ ವ್ಯಕ್ತಿಯ ಬೆನ್ನು ಉಜ್ಜಿದ್ದಾನೆ. ನಂತರ ಬಾಗಿ ನಿಂತಿದ್ದ ವ್ಯಕ್ತಿಗೆ ಚಮಕ್​ ನೀಡುವ ಜೆಸಿಬಿ ಡ್ರೈವರ್​ ಅದೇ ಜೆಸಿಬಿ ಸೊಂಡಿಲಿನಿಂದ ತಮಾಷೆಯಾಗಿ ವ್ಯಕ್ತಿಯನ್ನು ಮೇಲೆತ್ತಲು ಯತ್ನಿಸುವ ವಿಡಿಯೋ ಇದಾಗಿದೆ.

ವಿಡಿಯೋವನ್ನು ಗಮನಿಸುವಾಗ ಈ ಘಟನೆ ನಡೆದಿರುವುದು ದಕ್ಷಿಣ ಭಾರತದಲ್ಲೇ ಎಂದು ಕಂಡು ಬಂದರೂ, ಇದರ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

പൊറം ചൊറിഞ്ഞാൽ പിന്നെ എന്താ ചെയ്യാ

പൊറം ചൊറിഞ്ഞാൽ പിന്നെ എന്താ ചെയ്യാ

Posted by ABDUL NASAR on Sunday, 11 October 2020

- Advertisement -
spot_img

Latest News

error: Content is protected !!