Saturday, June 6, 2026
Homeತಾಜಾ ಸುದ್ದಿಬೆಂಗಳೂರಿನ ಕೆ ಆರ್ ಮಾರ್ಕೇಟ್ ಫ್ಲೈ ಓವರ್ ನಿಂದ ನೋಟುಗಳ ರಾಶಿ ಎಸೆದ ಭೂಪ; ಹಣ...

ಬೆಂಗಳೂರಿನ ಕೆ ಆರ್ ಮಾರ್ಕೇಟ್ ಫ್ಲೈ ಓವರ್ ನಿಂದ ನೋಟುಗಳ ರಾಶಿ ಎಸೆದ ಭೂಪ; ಹಣ ಹೆಕ್ಕಲು ಮುಗಿ ಬಿದ್ದ ಜನ

- Advertisement -
- Advertisement -

ಬೆಂಗಳೂರು; ಭೂಪನೊಬ್ಬ ಕೆ ಆರ್ ಮಾರ್ಕೇಟ್  ಫ್ಲೈಓವರ್ ಮೇಲಿಂದ 10 ರೂ.ಮುಖಬೆಲೆಯ ನೋಟುಗಳ ರಾಶಿಯನ್ನು ಎಸೆದ ಘಟನೆ ನಡೆದಿದೆ. ನೋಟು ಎಸೆಯುತ್ತಿದ್ದಂತೆ ಅದನ್ನು ಹೆಕ್ಕಲು ಜನ ಮುಗಿ ಬಿದ್ದಿದ್ದಾರೆ.

ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲಿಂದ 10 ರೂ, 20 ಹಾಗೂ 50 ರೂಪಾಯಿ ಮುಖಬೆಲೆಯ ನೋಟುಗಳನ್ನು ಸೂಟ್ ಧರಿಸಿ, ಕೊರಳಿಗೆ ಗಡಿಯಾರ ನೇತು ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ  ಅರುಣ್ ಎಂಬ ವ್ಯಕ್ತಿ ಎಸೆದಿದ್ದಾನೆ ಎನ್ನಲಾಗಿದೆ.

ಫ್ಲೈಓವರ್ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿದ್ದವರು ಅದನ್ನು ಎತ್ತಿಕೊಳ್ಳಲು ಮುಗಿ ಬಿದ್ದಿದ್ದಾರೆ.ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಅರುಣ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!