Friday, June 5, 2026
Homeಕರಾವಳಿಕಾಸರಗೋಡುಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಸಾವು

ಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಸಾವು

- Advertisement -
- Advertisement -

ಕಾಸರಗೋಡು: ಕೋವಿಯಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.

ಸಿಪಿಐ ಮುಖಂಡ ಮಾಧವನ್ (65)ಮೃತ ದುರ್ವೈವಿ. ಮಾಧವನ್ ಅವರು ಹಲಸಿನ ಹಣ್ಣು ಕೊಯ್ಯಲು ತೆರಳುತ್ತಿದ್ದಾಗ ಅಲ್ಲಿದ್ದ ಕೋವಿಯನ್ನು ಆಕಸ್ಮಿಕವಾಗಿ ಮೆಟ್ಟಿದ್ದಾರೆ. ಪರಿಣಾಮ ಗುಂಡು ಸಿಡಿದು ಅವರು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆದರೆ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!