Saturday, June 27, 2026
HomeUncategorizedಪುತ್ತೂರು; ಮನೆಯಿಂದ ಕೆಲಸಕ್ಕೆಂದು ಬೆಂಗಳೂರಿಗೆ ಹೋದ ವ್ಯಕ್ತಿ ನಾಪತ್ತೆ

ಪುತ್ತೂರು; ಮನೆಯಿಂದ ಕೆಲಸಕ್ಕೆಂದು ಬೆಂಗಳೂರಿಗೆ ಹೋದ ವ್ಯಕ್ತಿ ನಾಪತ್ತೆ

- Advertisement -
- Advertisement -

ಪುತ್ತೂರು; ಮನೆಯಿಂದ ಕೆಲಸಕ್ಕೆಂದು ಹೋದ ಬೆಂಗಳೂರಿಗೆ ಹೋದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಮಾಡಾವಿನ ಕೆಯ್ಯೂರು ಎಂಬಲ್ಲಿ ನಡೆದಿದೆ. ಕೆಯ್ಯೂರಿನ ಉದ್ದೋಲೆ ನಿವಾಸಿ ದೀಕ್ಷಿತ್ ಕೆ.ಜೆ (36) ನಾಪತ್ತೆಯಾದವರು.

ದೀಕ್ಷಿತ್ ಅವರು ಮನೆಯಿಂದ ಕೆಲಸಕ್ಕೆಂದು ಹೋದವರು ನವೆಂಬರ್ 30 ರಿಂದ ನಾಪತ್ತೆಯಾಗಿದ್ದಾರೆ ಎಂದು ಅವರ ಪತ್ನಿ ಗಾಯತ್ರಿ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗ್ರಾಫಿಕ್ಸ್ ಡಿಸೈನರ್ ಆಗಿರುವ ದೀಕ್ಷಿತ್  ಒಂದು ತಿಂಗಳಿಂದ ಪತ್ನಿಯ ತಾಯಿ ಮನೆಯಲ್ಲಿ ಇದ್ದರು. ನವೆಂಬರ್ 30 ರಂದು ಕೆಲಸಕ್ಕೆಂದು ಬೆಂಗಳೂರಿಗೆ ಬೈಕ್ ನಲ್ಲಿ ತೆರಳಿದ್ದರು ಎನ್ನಲಾಗಿದೆ. ಮೈಸೂರು ತಲುಪಿದ ನಂತರ, ಡಿಸೆಂಬರ್ 2ರಂದು ರಾಮನಗರಕ್ಕೆ ಬಂದಿರುವ ಬಗ್ಗೆ ಅವರು ಕುಟುಂಬಕ್ಕೆ ತಿಳಿಸಿದ್ದರು. ಡಿಸೆಂಬರ್ 3ರ ರಾತ್ರಿ 12 ಗಂಟೆಗೆ ಪತ್ನಿಗೆ ಕರೆ ಮಾಡಿ “ಬೆಂಗಳೂರು ತಲುಪಿದ್ದೇನೆ, ಮೊಬೈಲ್ ಚಾರ್ಜ್ ಕಡಿಮೆ ಇದೆ, ಆರೋಗ್ಯ ಸ್ವಲ್ಪ ಸರಿಯಿಲ್ಲ, ಮತ್ತೆ ಕರೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ. ನಂತರದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರಿಂದಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.

ಕಾಣೆಯಾದವರ ವಿವರ:

ಹೆಸರು: ದೀಕ್ಷಿತ್ ಕೆ.ಜೆ ವಯಸ್ಸು: 36

ದೇಹದ ವೈಶಿಷ್ಟ್ಯಗಳು: ದೃಢಕಾಯ, ದುಂಡು ಮುಖ, ಗುಂಗುರು ಕೂದಲು, ಕುರುಚಲು ಗಡ್ಡ ಹಾಗೂ ಮೀಸೆ

ಧರಿಸಿದ್ದ ಬಟ್ಟೆಗಳು: ತಿಳಿ ಹಸಿರು ಹಾಗೂ ಕೇಸರಿ ಬಣ್ಣದ ಟೀ ಶರ್ಟ್, ಸಾದಾ ಪ್ಯಾಂಟ್

ಭಾಷೆ: ಕನ್ನಡ, ತುಳು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರಂ: 137/2025 ರಂತೆ ಪ್ರಕರಣ ದಾಖಲಾಗಿದ್ದು, ದೀಕ್ಷಿತ್ ಅವರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!