ಕಡಬ: ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ವೇಳೆ ಅಸಭ್ಯವಾಗಿ ವರ್ತಿಸಿ, ಜಾತಿ ನಿಂದನೆ ಮಾಡಿದ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐತ್ತೂರು ಗ್ರಾಮದ ಉಮೇಶ್ ಗೌಡ ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.
ಉಮೇಶ್ ಗೌಡ ನ.13 ರ ಮಧ್ಯರಾತ್ರಿ ತನ್ನ ಮನೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಮಹಿಳೆ ಬಳಿ ಬಂದು ಏಕಾಏಕಿ ಬಂದು ಅಸಭ್ಯವಾಗಿ ವರ್ತಿಸಿದ್ದು ಆಕೆ ಸಹಾಯಕ್ಕಾಗಿ ಕಿರುಚಾಡಿದ್ದಾರೆ.. ಕೂಡಲೇ ಮನೆ ಮಂದಿ ಬಂದು ವ್ಯಕ್ತಿಯನ್ನು ಹಿಡಿದು ಕೊಂಡಿದ್ದು ಆಗ ಸ್ಥಳೀಯ ವ್ಯಕ್ತಿ ಎಂದು ಗೊತ್ತಾಗಿದೆ.
ಆರೋಪಿ ಮನೆ ಮಂದಿಗೆ ಹಲ್ಲೆಗೈದು ಜಾತಿ ನಿಂದನೆಗೈದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಈತ ಈ ಹಿಂದೆ ಪೋಕ್ಸೋ ಪ್ರಕರಣದ ಆರೋಪಿಯಾಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಹಿಳೆಯಿಂದ ದೂರು ಪಡೆದ ಪೊಲೀಸರು ಆರೋಪಿಯ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.


