ಮಂಗಳೂರು ; ಸೈಬರ್ ವಂಚನೆಗೆ 300 ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್ ಗಳನ್ನು ಬಳಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಯಾರೋ ಅಪಚಿರಿತ ವ್ಯಕ್ತಿ ದೂರುದಾರರೊಬ್ಬರಿಂದ ಕಸ್ಟಮ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7,27,000/- ಹಣವನ್ನು ಪಡೆದು ವಂಚಿಸಿದ್ದರು. ಈ ಬಗ್ಗೆ ವಂಚನೆಗೊಳಗಾದವರು ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ತ್ರಿಪುರಾ ರಾಜ್ಯದ ಡಮೆನ್ ಜಾಯ್ (27) ಹಾಗೂ ಮಣಿಪುರದ ಮಣ್ಗೇಟ್ ಅಮೋಶ್ (33) ಬಂಧಿತರು.
ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ವಿವರ ಪರಿಶೀಲಿಸಿ ಬ್ಯಾಂಕ್ ಖಾತೆದಾರನಾದ ಡಮೆನ್ ಜಾಯ್ ಎಂಬಾತನನ್ನು ದಿನಾಂಕ: 13-11-2025 ರಂದು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿರುತ್ತದೆ.
ಪ್ರಕರಣದಲ್ಲಿ ತನಿಖೆ ಮುಂದುವರೆಸಿ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು ಸೈಬರ್ ವಂಚಕರಿಗೆ ನೀಡಿದ ಸುಳಿವಿನ ಆಧಾರದಲ್ಲಿ ಮಣ್ಗೇಟ್ ಅಮೋಶ್ ಎಂಬಾತನನ್ನು ದಿನಾಂಕ: 15-11-2025 ರಂದು ಬೆಂಗಳೂರಿನಲ್ಲಿ ಬಂಧಿಸಿ ದಿನಾಂಕ:16-11-2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿರುತ್ತದೆ.
ತನಿಖೆಯ ವೇಳೆ ಆರೋಪಿತನಾದ ಮಣ್ಗೇಟ್ ಅಮೋಶ್ ಎಂಬಾತನು 300 ಕ್ಕೂ ಹೆಚ್ಚೂ ಬ್ಯಾಂಕ್ ಖಾತೆಗಳನ್ನು ಹಾಗೂ 250 ಕ್ಕೂ ಹೆಚ್ಚು ಸಿಮ್ ಕಾರ್ಡ್ ಗಳನ್ನು ಸೈಬರ್ ವಂಚನೆಗ ಬಳಕೆ ಮಾಡಿರುವುದು ಕಂಡುಬಂದಿರುತ್ತದೆ. ಮಣ್ಗೇಟ್ ಅಮೋಶ್ ನಿಂದ 08-ಮೊಬೈಲ್ ಫೋನ್ ಗಳು, 20- ವಿವಿಧ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಗಳು,18- ವಿವಿಧ ಬ್ಯಾಂಕ್ ಗಳ ಪಾಸ್ ಬುಕ್ ಗಳು,11- ವಿವಿಧ ಬ್ಯಾಂಕ್ ಗಳ ಚೆಕ್ ಬುಕ್ ಹಾಗೂ 7- ಸಿಮ್ ಕಾರ್ಡ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ.
ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರದ ಸೆನ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿರುತ್ತಾರೆ.


