Saturday, June 13, 2026
Homeಕರಾವಳಿಮಂಗಳೂರುಮಂಗಳೂರು: ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ನಾಪತ್ತೆ

ಮಂಗಳೂರು: ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ನಾಪತ್ತೆ

- Advertisement -
- Advertisement -

ಮಂಗಳೂರು: ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೇರಳ ಪಾಲಕ್ಕಾಡ್ ನಿವಾಸಿ ರಾಬಿಯ, ಅಬೂಬಕರ್ ದಂಪತಿಯ ಪುತ್ರ ಮಾಲೀಕ್ ಅಬೂಬಕರ್ ನಾಪತ್ತೆಯಾದ ವಿದ್ಯಾರ್ಥಿ.

ಈತ ದೇರಳಕಟ್ಟೆ ಖಾಸಗಿ ಕಾಲೇಜಿನಲ್ಲಿ ಬಿಎನ್‌ವೈಎಸ್ ಶಿಕ್ಷಣ ಪಡೆಯುತ್ತಿದ್ದು, ಅವರು ತಅಬ್ದುಲ್‌ ಶರೀಫ್ ಎಂಬವರ ಪಿಜಿಯಲ್ಲಿ ವಾಸವಾಗಿದ್ದರು. ನವೆಂಬರ್ 13 ರಂದು ರಾತ್ರಿ ಊಟ ಮಾಡಿ ಬರುತ್ತೇನೆ ಎಂದು ಹೇಳಿ ಹೋದವರು ವಾಪಸ್ ಪಿಜಿಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ . ಈ ಕುರಿತು ಮಾಲೀಕ್ ಅಬೂಬಕರ್ ಅವರ ತಾಯಿಯ ತಮ್ಮ ಫಿಸಿಯೊಥೆರಪಿ ವೈದ್ಯ ಅಝ್ಮಲ್ ಟಿ.ಎ. ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!