Friday, June 5, 2026
Homeತಾಜಾ ಸುದ್ದಿಡೇಟಿಂಗ್ ಆಪ್ ನಲ್ಲಿ ಸುಂದರ ಹುಡುಗಿಯ ಮೋಹಕ್ಕೆ ಬಿದ್ದು ಕೋಟ್ಯಂತರ ರೂಪಾಯಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್

ಡೇಟಿಂಗ್ ಆಪ್ ನಲ್ಲಿ ಸುಂದರ ಹುಡುಗಿಯ ಮೋಹಕ್ಕೆ ಬಿದ್ದು ಕೋಟ್ಯಂತರ ರೂಪಾಯಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್

- Advertisement -
- Advertisement -

ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಇಂಡಿಯನ್ ಬ್ಯಾಂಕ್ ಮ್ಯಾನೇಜರ್​ ಓರ್ವ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. ಹನುಮಂತನಗರ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿಶಂಕರ್ ಡೇಟಿಂಗ್ ಆಯಪ್ ಲೇಡಿಯ ಲವ್ ಕಹಾನಿ ಬಗ್ಗೆ ಬಾಯ್ಬಿಟ್ಟಿದ್ದಾನೆ.

ಹನುಮಂತನಗರ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹರಿಶಂಕರ್, ಮೇ 13 ರಿಂದ 19 ರ ವರೆಗೆ ಬ್ಯಾಂಕ್ ಠೇವಣಿದಾರರಾದ ಅನಿತಾರ ಎಫ್​ಡಿ‌ ಮೇಲೆ ಸರಿಸುಮಾರು 6 ಕೋಟಿ ರೂಪಾಯಿಯಷ್ಟು ಲೋನ್ ತೆಗೆದಿದ್ದಾನೆ. ಅಸಿಸ್ಟೆಂಟ್ ಮ್ಯಾನೇಜರ್ ಕೌಸಲ್ಯಾ ಹಾಗೂ ಕ್ಲರ್ಕ್ ಮುನಿರಾಜುವನ್ನ ಬಳಸಿಕೊಂಡು ಲೋನ್ ಮಾಡಿಸಿಕೊಂಡಿದ್ದ ಈತ, ವೆಸ್ಟ್ ಬೆಂಗಾಲ್​​ನ 28 ಬ್ಯಾಂಕ್ ಖಾತೆಗೆ ಹಣವನ್ನ ಜಮಾ ಮಾಡಿದ್ದ. ಆ ಹಣವನ್ನ ಡೇಟಿಂಗ್ ಆಯಪ್​​​ನಲ್ಲಿ ಪರಿಚಯವಾಗಿದ್ದ ಲೇಡಿ ಒಬ್ಬಳಿಗೆ ಕಳಿಸಿದ್ದಾನೆ.

ಪ್ರಕರಣ ಸಂಬಂಧ ಪೊಲೀಸರ ವಿಚಾರಣೆ ವೇಳೆ ಬ್ಯಾಂಕ್ ಮ್ಯಾನೇಜರ್ ಪ್ರೇಮಪುರಾಣ ಬಟಾಬಯಲಾಗಿದೆ. ಡೇಟಿಂಗ್ ಆಯಪ್ ಬೆಡಗಿಗಾಗಿ 6 ಕೋಟಿ ರೂ. ಕಳಕೊಂಡಿದ್ದೇನೆ ಎಂದು ತನಿಖೆ ವೇಳೆ ತಿಳಿಸಿದ್ದಾನೆ. ಡೇಟಿಂಗ್ ಆಯಪ್ ನಲ್ಲಿ ನನ್ನ ಹಣವನ್ನೂ ಕಳಕೊಂಡೆ, ಕರ್ತವ್ಯ ಲೋಪ ಎಸಗಿ 6 ಕೋಟಿ ಹಣವನ್ನು ಲೇಡಿಗೆ ತಿನ್ನಿಸಿದೆ ಅಂತ ವಿಚಾರಣೆ ವೇಳೆ ಹೇಳಿದ್ದಾನಂತೆ.

ಇದೀಗ ಹನುಮಂತನಗರ ಪೊಲೀಸರು ಹರಶಂಕರ್ ನನ್ನ ಹೆಚ್ಚಿನ ವಿಚಾರಣೆಗಾಗಿ ನಿನ್ನೆ 31ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿ 10 ದಿನ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರೇಮಪುರಾಣದಲ್ಲಿ ಕೋಟಿ‌ ಕೊಟ್ಟು ಕೈ ಸುಟ್ಟುಕೊಂಡ ಮ್ಯಾನೇಜರ್ ಹರಿಶಂಕರ್ ಇದೀಗ ಜೈಲಿನಲ್ಲಿ ಮುದ್ದೆಮುರೀತಿದ್ದಾನೆ.

- Advertisement -

Latest News

error: Content is protected !!