Thursday, June 25, 2026
Homeತಾಜಾ ಸುದ್ದಿಚಿರತೆ ಬೋನಿಗೆ ಇಣುಕಲು ಹೋಗಿ ಮೂರು ಗಂಟೆ ಕಾಲ ಲಾಕ್ ಆದ ವ್ಯಕ್ತಿ!

ಚಿರತೆ ಬೋನಿಗೆ ಇಣುಕಲು ಹೋಗಿ ಮೂರು ಗಂಟೆ ಕಾಲ ಲಾಕ್ ಆದ ವ್ಯಕ್ತಿ!

- Advertisement -
- Advertisement -

ಚಾಮರಾಜನಗರ: ಚಿರತೆ ಹಿಡಿಯಲು ಇಟ್ಟಿದ್ದ ಬೋನಿನಲ್ಲಿ ಇಣುಕಲು ಹೋದ ವ್ಯಕ್ತಿಯೋರ್ವ ಲಾಕ್ ಆದ ಘಟನೆ ಚಾಮರಾಜನಗರ ‌ಜಿಲ್ಲೆಯಲ್ಲಿ ನಡೆದಿದೆ.

ಯಳಂದೂರು ತಾಲೂಕು ಗಂಗವಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಿಟ್ಟಿ ಎಂಬ ವ್ಯಕ್ತಿ ಬೋನಿನಲ್ಲಿ ಸಿಕ್ಕಿಹಾಕಿಕೊಂಡು‌ ಮೂರು ಗಂಟೆಗಳ ಜಾಲ ಒದ್ದಾಟ ನಡೆಸಿದ್ದಾರೆ.

ಗಂಗವಾಡಿ ಗ್ರಾಮದ ಹೊರವಲಯದಲ್ಲಿ ಚಿರತೆ ಹಿಡಿಯಲು ಇರಿಸಿದ್ದ ಬೋನಿನ ಒಳಗೆ ಕುತೂಹಲಕ್ಕೆಂದು‌ ಕಿಟ್ಟಿ ತೆರಳಿದ್ದದ್ದು ಒಳಗೆ ಹೋಗುತ್ತಿದ್ದಂತೆ ಬೋನಿನ ಗೇಟ್ ಲಾಕ್ ಆಗಿದೆ.

ಕಿಟ್ಟಿ ಬೋನಿನ ಗೇಟ್ ತೆರೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದ ಮೂರು ಗಂಟೆಗಳ ಕಾಲ ಬೋನಿನ ಒಳಗೆ ಬಾಕಿಯಾಗಿದ್ದಾರೆ.

ಕೊನೆಗೆ ಜಮೀನಿನ ಕೆಲಸಕ್ಕಾಗಿ ಸ್ಥಳೀಯರು ಬಂದ ಬಳಿಕ ಬೋನ್ ತೆರೆದು ಲಾಕ್ ಆಗಿದ್ದ ‌ಕಿಟ್ಟಿ ಹೊರಬಂದಿದ್ದಾರೆ

- Advertisement -

Latest News

error: Content is protected !!