Friday, June 5, 2026
Homeಕ್ರೀಡೆಕೊಡಗಿನಲ್ಲಿ ವ್ಯಕ್ತಿಯಿಂದ ಅನ್ಯಕೋಮಿನ ಮಹಿಳೆಯ ಕೊಲೆ

ಕೊಡಗಿನಲ್ಲಿ ವ್ಯಕ್ತಿಯಿಂದ ಅನ್ಯಕೋಮಿನ ಮಹಿಳೆಯ ಕೊಲೆ

- Advertisement -
- Advertisement -

ಮಡಿಕೇರಿ; ವ್ಯಕ್ತಿಯೊಬ್ಬ ಅನ್ಯಕೋಮಿನ ಮಹಿಳೆಯೊಬ್ಬರನ್ನು ಚೂರಿಯಿಂದ ಇರಿದು ಕೊಂದ ಘಟ‌ನೆ ಕೊಡಗಿನ ಸೋಮವಾರಪೇಟೆ ಜಂಬೂರುಬಾಣೆಯಲ್ಲಿ ನಡೆದಿದೆ.ತಾಹಿರಾ(35)ಕೊಲೆಯಾದ ಮಹಿಳೆ.ಘಟನೆಗೆ ಸಂಬಂಧಿಸಿದಂತೆ ಆರೋಪಿ ಪೂವಯ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮೃತ ತಾಹಿರಾಳ ಪತಿ ಹಂಝ 5 ವರ್ಷಗಳ ಹಿಂದೆ ಆಕೆಯನ್ನು ತ್ಯಜಿಸಿದ್ದು,ನಂತರದ ದಿನಗಳಲ್ಲಿ ಆರೋಪಿ ಪೂವಯ್ಯ ತಾಹಿರಾಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ ಎನ್ನಲಾಗಿದೆ. ನಿನ್ನೆ ತಾಹಿರಾ ಮನೆಗೆ ತೆರಳಿದ ಪೂವಯ್ಯ ಚೂರಿಯಿಂದ ಇರಿದಿದ್ದಾನೆ.ತೀವ್ರವಾಗಿ ಗಾಯಗೊಂಡ ತಾಹಿರಾಳನ್ನು ಮಕ್ಕಳು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇನ್ನು ಕೊಲೆಗೆ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ.

ಈ ಕುರಿತು ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!