Wednesday, June 3, 2026
Homeಕರಾವಳಿತನ್ನಿಬ್ಬರು ಮಕ್ಕಳನ್ನು ನದಿಗೆ ತಳ್ಳಿ, ವ್ಯಕ್ತಿ ಆತ್ಮಹತ್ಯೆ

ತನ್ನಿಬ್ಬರು ಮಕ್ಕಳನ್ನು ನದಿಗೆ ತಳ್ಳಿ, ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕೇರಳ: ತನ್ನಿಬ್ಬರು ಮಕ್ಕಳನ್ನು ನದಿಗೆ ತಳ್ಳಿ, ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕೊಚ್ಚಿಯ ಪಲರಿವಟ್ಟಂನಲ್ಲಿ ನಡೆದಿದೆ. 57 ವರ್ಷದ ವ್ಯಕ್ತಿ ಉಲ್ಲಾಸ್ ಹರಿಹರನ್​ ಮಕ್ಕಳಾದ ಕೃಷ್ಣಪ್ರಿಯ ಮತ್ತು ಮೇಘನಾಥ್ ನನ್ನು ನದಿ ನೀರಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌.

ಮಕ್ಕಳನ್ನು ಅಲುವ ಬಳಿ ಪೆರಿಯಾರ್ ನದಿಗೆ ತಳ್ಳಿ, ಬಳಿಕ ತಾನೂ ನೀರಿಗೆ ಹಾರಿದ್ದಾರೆ. ಇದನ್ನು ನೋಡಿದ ಸ್ಥಳೀಯರು ನೀರಿಗೆ ಧುಮುಕಿ ಮಕ್ಕಳನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವಿಗೀಡಾಗಿದ್ದಾರೆ. ಪೊಲೀಸರು ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿ‌ ಮೂವರ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ.

- Advertisement -

Latest News

error: Content is protected !!