Friday, June 5, 2026
Homeಕರಾವಳಿಸುಳ್ಯ: ಪಂಜದಲ್ಲಿ ಮನೆ ಮಾಲೀಕ ಶವವಾಗಿ ಪತ್ತೆ

ಸುಳ್ಯ: ಪಂಜದಲ್ಲಿ ಮನೆ ಮಾಲೀಕ ಶವವಾಗಿ ಪತ್ತೆ

- Advertisement -
- Advertisement -

ಸುಳ್ಯ: ಏಕಾಂಗಿಯಾಗಿ ವಾಸಿಸುತ್ತಿದ್ದ ಮನೆ ಮಾಲೀಕರೊಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಪಂಜ ಸಮೀಪದ ಕೂತ್ಕುಂಜ ಎಂಬಲ್ಲಿ ನಡೆದಿದೆ.

ಕೂತ್ಕುಂಜದ ಪುತ್ಯ ನಿವಾಸಿಯಾಗಿರುವ ತಿರುವಲೇಶ್ವರ ಅವರು ಪತ್ನಿಯಿಂದ ದೂರವಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದರು. ಅವರ ಮನೆಯ ಪಕ್ಕದಲ್ಲೇ ಇದ್ದ ತಾಯಿ ಹಾಗೂ ಸಹೋದರ ಶಿವರಾಮ ಅವರು ತಮ್ಮ ಜಾಗವನ್ನು ಮಾರಾಟ ಮಾಡಿ ಕಡಬದಲ್ಲಿ ಜಾಗ ತೆಗೆದು ಅಲ್ಲಿ ವಾಸಿಸುತ್ತಿದ್ದರು.

ಕಳೆದ ಕೆಲವು ದಿನಗಳಿಂದ ತಿರುಮಲೇಶ್ವರ ಅವರು ಸಹೋದರ ಶಿವರಾಮ ಅವರ ಸಂಪರ್ಕಕ್ಕೆ ಸಿಗದ ಕಾರಣ ಪಂಜದ ಕೆಲವರಲ್ಲಿ ತಿರುಮಲೇಶ್ವರ ಅವರ ಬಗ್ಗೆ ವಿಚಾರಿಸಿದ್ದರು. ಅಲ್ಲದೇ ಅವರ ನೆರೆಹೊರೆಯವರಲ್ಲಿಯೂ ವಿಚಾರಿಸಿದ್ದರು. ಬಳಿಕ ನೆರೆಹೊರೆಯವರು ಹೋಗಿ ನೋಡಿದಾಗ ತಿರುಮಲೇಶಅವರ ಅವರು ಮಲಗಿದಲ್ಲೇ ಸಾವನ್ನಪ್ಪಿರೋದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ತಿರುಮಲೇಶ್ವರ ಅವರು ಅನಾರೋಗ್ಯದಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಏಪ್ರಿಲ್ 15 ರಂದು ತಿರುಲೇಶ್ವರ ಅವರ ಸಹೋದರ ಕೂಡ ಇದೇ ರೀತಿ ಸಾವನ್ನಪ್ಪಿದ್ದರು.ಏಕಾಂಗಿಯಾಗಿ ವಾಸಿಸುತ್ತಿದ್ದ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ಕೆಲವು ದಿನಗಳ ನಂತರ ಅವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಇದೀಗ ತಿರುಮಲೇಶ್ವರ ಅವರು ಕೂಡ ಅದೇ ರೀತಿ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!