Friday, June 5, 2026
Homeಕರಾವಳಿಬಂಟ್ವಾಳ: ಕೈ ಕಾಲು ತೊಳೆಯಲೆಂದು ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನಾಪತ್ತೆ

ಬಂಟ್ವಾಳ: ಕೈ ಕಾಲು ತೊಳೆಯಲೆಂದು ನೇತ್ರಾವತಿ ನದಿಗೆ ಇಳಿದ ವ್ಯಕ್ತಿ ನಾಪತ್ತೆ

- Advertisement -
- Advertisement -

ಬಂಟ್ವಾಳ: ಕೆಲಸ ಮುಗಿಸಿ ಕೈ ಕಾಲು ತೊಳೆಯಲೆಂದು ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೋರ್ವ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.

ಛತ್ತೀಸ್ ಘಡ್ ರಾಜ್ಯ ದ ಬಸ್ತರ ಜಿಲ್ಲೆಯ ಬಡ್ಡೆಬಂದಮ ಗ್ರಾಮದ ಜಮ್ಮವಾಡ ನಿವಾಸಿ ಆನಂದ್ ಕಶ್ಯಪ್ (28) ಕಾಣೆಯಾದವರು. ಆನಂದ್ ಕಶ್ಯಪ್ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ರೈಲ್ವೆ ಸ್ಟೇಷನ್ ನ ಪಕ್ಕದಲ್ಲಿ ರೈಲ್ವೆ ವಿದ್ಯುದೀಕರಣ ಕಾಮಗಾರಿಯನ್ನು ಮಾಡಿಕೊಂಡಿದ್ದು, ಜೊತೆಯಲ್ಲಿ ಛತ್ತೀಸ್ ಘಡ್ ಮೂಲದ ಕೆಲಸಗಾರರು ಇದ್ದರು.

ಆನಂದ ಕಶ್ಯಪ್ ಅವರು ಕೆಲಸ ಮುಗಿಸಿ ಬಳಿಕ ಅಲ್ಲೇ ಸಮೀಪ ನೇತ್ರಾವತಿ ನದಿಗೆ ಕೈಕಾಲು ತೊಳೆಯಲು ನೀರಿಗೆ ಇಳಿದ ವೇಳೆ ಆಯ ತಪ್ಪಿ ನದಿಗೆ ಬಿದ್ದು ಬೊಬ್ಬೆ ಹೊಡೆದಿದ್ದಾರೆ. ಕೂಡಲೇ ಅವರೊಂದಿಗೆ ಇದ್ದ ಇತರ ಕೆಲಸಗಾರರು ಓಡಿ ಹೋಗಿ ನೋಡಿದಾಗ ಅವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದಾರೆ ಎಂದು ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!