Wednesday, June 3, 2026
Homeತಾಜಾ ಸುದ್ದಿಬೈಕ್ ಹುಟ್ಟುಹಬ್ಬ ಆಚರಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ

ಬೈಕ್ ಹುಟ್ಟುಹಬ್ಬ ಆಚರಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ

- Advertisement -
- Advertisement -

ಕೊಪ್ಪಳ: ಬೈಕ್ ಬಗ್ಗೆ ವಿಪರೀತ ಕ್ರೇಜ್ ಹೊಂದಿದ್ದ ವಿದ್ಯಾರ್ಥಿಯೊಬ್ಬ ಬೈಕ್ ನ ಹುಟ್ಟು ಹಬ್ಬ ಆಚರಣೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ.

ಗಂಗಾವತಿಯ ವಿದ್ಯಾರ್ಥಿ ವೀರೇಶ್ ಎಂಬಾತ ಬೈಕ್ ಗೂ ಹುಟ್ಟು ಹಬ್ಬ ಆಚರಣೆ ಮಾಡಿ ಕೇಕ್ ಕಟ್ ಮಾಡಿದ್ದಾನೆ. ಯಮಹಾ ಆರ್ ಎಕ್ಸ್ ಬೈಕ್ ಖರೀದಿಸಿ ಒಂದು ವರ್ಷ ಆಗಿದ್ದ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾನೆ.‌

ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿರುವ ವೀರೇಶ್ 50 ಸಾವಿರ ರೂಪಾಯಿ ಕೊಟ್ಟು ಸೆಕೆಂಡ್ ಹ್ಯಾಂಡ್
ಬೈಕ್ ಖರೀದಿ ಮಾಡಿದ್ದನು. ಅಲ್ಲದೇ ತನ್ನ ಬೈಕ್ ಹುಟ್ಟು ಹಬ್ಬಕ್ಕೆ ವೀರೇಶ್ ಸ್ನೇಹಿತರಿಗೆ ಪಾರ್ಟಿ ಕೂಡಾ ಕೊಟ್ಟಿದ್ದಾನೆ.

- Advertisement -

Latest News

error: Content is protected !!