Thursday, June 4, 2026
Homeಕರಾವಳಿಬೆಳ್ತಂಗಡಿಯಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವ್ಯಕ್ತಿ ಸಾವು

ಬೆಳ್ತಂಗಡಿಯಲ್ಲಿ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ ನೀರಿನ ಟ್ಯಾಂಕಿ ಸ್ವಚ್ಛಗೊಳಿಸಲು ಟ್ಯಾಂಕಿಗಿಳಿದ ವೇಳೆ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೊಯ್ಯೂರು ಗ್ರಾಮದ ಅತ್ಯಾರ ಎಂಬಲ್ಲಿ ನಡೆದಿದೆ.ಶ್ರೀಧರ ಗೌಡ ಮೃತ ದುರ್ದೈವಿ.

ಶ್ರೀಧರ ಗೌಡ ಕೂಲಿ ಕೂಲಿ ಕಾರ್ಮಿಕರಾಗಿದ್ದು ನಿನ್ನೆ ತಮ್ಮ ಸಂಬಂಧಿ ಚಂದಪ್ಪ ಗೌಡ ಎಂಬವರ ಮನೆಯ ಬಳಿಯ ನೀರಿನ ಟ್ಯಾಂಕ್ ಸ್ವಚ್ಛ ಮಾಡಲು ಹೋಗಿದ್ದರು. ಸಂಜೆಯಾದರು ಪತಿ ಮರಳಿ ಬಾರದ ಕಾರಣ ನಳಿನಿಯವರು ಚಂದಪ್ಪ ಗೌಡರ ಮನೆಗೆ ತೆರಳಿ ವಿಚಾರಿಸಿದ್ದರು. ಈ ಹಿನ್ನೆಲೆಯಲ್ಲಿ ನೀರಿನ ಟ್ಯಾಂಕನ ಬಳಿ ಸಂಜೆ 6 ಗಂಟೆಗೆ ಹೋಗಿ ನೋಡಿದಾಗ ಶ್ರೀಧರ ಗೌಡರು ಟ್ಯಾಂಕ್ ನೀರಿನಲ್ಲಿ ಅರ್ಧ ಮುಳುಗಿದ್ದು ಕಂಡು ಬಂದಿತೆನ್ನಲಾಗಿದೆ. ಕೂಡಲೇ ಅವರನ್ನು ನೀರಿನಿಂದ ಮೇಲಕ್ಕೆತ್ತಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರೆನ್ನಲಾಗಿದೆ.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!