Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಬಾವಿಗೆ ಬಿದ್ದ ಯುವಕನ ರಕ್ಷಣೆ

ಮಂಗಳೂರಿನಲ್ಲಿ ಬಾವಿಗೆ ಬಿದ್ದ ಯುವಕನ ರಕ್ಷಣೆ

- Advertisement -
- Advertisement -

ಮಂಗಳೂರು: ರಾತ್ರಿ ವೇಳೆ ಬಾವಿಗೆ ಬಿದ್ದಿದ್ದ ಯುವಕನೊಬ್ಬನನ್ನು ಅಗನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಮಂಗಳೂರು‌ ನಗರದ ಕುಂಟಿಕಾನದ ಬಳಿ ನಡೆದಿದೆ.

ರಸ್ತೆ ಬದಿಯ ಮನೆಯೊಂದರ ಬಳಿ ಮುಂಜಾನೆಯಿಂದಲೇ ಯುವಕನ ಬೊಬ್ಬೆಕೇಳುತ್ತಿತ್ತು. ಹುಡುಕಾಡಿದಾಗ ಆತ ಬಾವಿಗೆ ಬಿದ್ದಿರೋದು ಗೊತ್ತಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಅಗ್ನಿಶಾಮಕದವರು ಕಾರ್ಯಚರಣೆ ನಡೆಸಿ ಯುವಕನನ್ನು ಮೇಲಕ್ಕೆತ್ತಿದ್ದಾರೆ.

ಈತನನ್ನು 25ರಿಂದ 26 ವರ್ಷ ವಯಸ್ಸಿನ ಅಸ್ಸಾಂ ಮೂಲದ ಯುವಕನೆಂದು ಗುರುತಿಸಲಾಗಿದೆ. ಈತ ಅಲ್ಲಿಗೆ ಯಾಕೆ ಬಂದಿದ್ದ, ಹೇಗೆ ಬಾವಿಗೆ ಬಿದ್ದ ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!