Wednesday, May 8, 2024
Homeಕರಾವಳಿಉಡುಪಿಇಬ್ಬರು ನಕ್ಸಲರನ್ನು ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದ ಪೊಲೀಸರು

ಇಬ್ಬರು ನಕ್ಸಲರನ್ನು ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದ ಪೊಲೀಸರು

spot_img
- Advertisement -
- Advertisement -

ಕಾರ್ಕಳ : ಇಬ್ಬರು ನಕ್ಸಲರನ್ನು ಕಾರ್ಕಳಕ್ಕೆ ಪೊಲೀಸರು ಕರೆತಂದಿದ್ದಾರೆ. ಶೃಂಗೇರಿ ಮೂಲದ ಬಿ. ಜಿ ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು ಮೂಲದ ಸಾವಿತ್ರಿ ಎಂಬವರನ್ನು ವಿಚಾರಣೆಗಾಗಿ ಕಾರ್ಕಳಕ್ಕೆ ಪೊಲೀಸರು ಕರೆ ತಂದಿದ್ದಾರೆ.

ಬಿ.ಜಿ ಕೃಷ್ಣಮೂರ್ತಿ 2005ರಿಂದ ನಕ್ಸಲ್ ನಾಯಕತ್ವ ವಹಿಸಿದ್ದರು. ಬಿ‌.ಜಿ ಕೃಷ್ಣಮೂರ್ತಿ 2021 ನಂಬರ್ 9ರಂದು ಬಂಧನವಾಗಿತ್ತು. ಕರ್ನಾಟಕದ ಗಡಿ ವಯನಾಡಿನಲ್ಲಿ ಬಿ.ಜಿ ಕೃಷ್ಣಮೂರ್ತಿ ಬಂಧನಕ್ಕೊಳಗಾಗಿದ್ದರು. ಬಿ.ಜಿ ಕೃಷ್ಣಮೂರ್ತಿ ಮೇಲೆ 53, ಸಾವಿತ್ರಿ ಮೇಲೆ 22 ಪ್ರಕರಣಗಳಿವೆ.

ಸಾವಿತ್ರಿ ಕೇರಳ ವಯನಾಡಿನ ಕೊಯಿಕ್ಕೋಡ್ ಕಬಿನಿ ದಳದ ಮುಖ್ಯಸ್ಥೆ. ಇಬ್ಬರನ್ನು 20 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.  ಉಡುಪಿ ಜಿಲ್ಲೆಯ 12ಕ್ಕೂ ಅಧಿಕ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಇಬ್ಬರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಕೃಷ್ಣಮೂರ್ತಿ, ಸಾವಿತ್ರಿ ಇರುವ ಠಾಣೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

- Advertisement -
spot_img

Latest News

error: Content is protected !!