Tuesday, July 14, 2026
Homeಕರಾವಳಿವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ವಿಟ್ಲ: ಆಕಸ್ಮಿಕವಾಗಿ ಕೆರೆಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಟ್ಲದ ಕೊಲ್ನಾಡು ಗ್ರಾಮದ ಕುಳಾಲು ಕುಡ್ತಡ್ಕ ಎಂಬಲ್ಲಿ ನಡೆದಿದೆ.ಕುಡ್ತಡ್ಕ ನಿವಾಸಿ ಸಿಪ್ರಿಯಾನ್ ಮೊಂತೆರೋ (55)ಮೃತ ವ್ಯಕ್ತಿ.

ಸಿಪ್ರಿಯಾನ್ ಸೋಮವಾರದಿಂದ ಮನೆಗೆ ಹೋಗದೇ ನಾಪತ್ತೆಯಾಗಿದ್ದರು. ಬುಧವಾರ ಬೆಳಗ್ಗೆ ಹುಡುಕಾಡಿದಾಗ ದಾರಿ ಮಧ್ಯದ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!