Thursday, June 4, 2026
Homeಕರಾವಳಿಕಾಸರಗೋಡು: ಮನೆಯ ಮಹಡಿಯಿಂದ ಬಿದ್ದು ಯುವಕ ಸಾವು 

ಕಾಸರಗೋಡು: ಮನೆಯ ಮಹಡಿಯಿಂದ ಬಿದ್ದು ಯುವಕ ಸಾವು 

- Advertisement -
- Advertisement -

ಕಾಸರಗೋಡು: ಮನೆಯ ಮಹಡಿಯಿಂದ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕುಂಬಳೆಯ ಕಿಂಬಳೆ ಮಂಡೆಕಾಪು ಎಂಬಲ್ಲಿ ನಡೆದಿದೆ.

ಮಂಗಲ್ಪಾಡಿ ಪಂಚಾಯತ್‌ನ ಹೇರೂರು ಕಂಗ್ವೆ ನಿವಾಸಿ, ಐತ್ತಪ್ಪ ಶೆಟ್ಟಿ ಅವರ ಪುತ್ರ ಸಂದೀಪ್‌ ಶೆಟ್ಟಿ (35) ಮೃತ ಯುವಕ. ಸಂದೀಪ್ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದರು. ಮಂಡೆಕಾಪು ಎಂಬಲ್ಲಿ ಮನೆಯೊಂದರ ಛಾವಣಿಗೆ ಶೀಟ್‌ ಹಾಕಲು ಅಳತೆ ತೆಗೆಯುತ್ತಿದ್ದಾಗ ಮಹಡಿಯಿಂದ ಕೆಳಗೆ ಬಿದ್ದು ಸಂದೀಪ್ ಸಾವಿಗೀಡಾಗಿದ್ದಾರೆ.

ಸಂದೀಪ್ ಅವಿವಾಹಿತರಾಗಿದ್ದು ಸಹೋದರಿಯನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

- Advertisement -

Latest News

error: Content is protected !!