Sunday, June 7, 2026
Homeಕರಾವಳಿಉಡುಪಿಕುಂದಾಪುರ; ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ; ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

- Advertisement -
- Advertisement -

ಕುಂದಾಪುರ;ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರದಲ್ಲಿ ನಡೆದಿದೆ.

ಕಾಳಾವರ ನರಿಕೊಡ್ಲು ಮನೆ ನಿವಾಸಿ ಹರೀಶ್ ಪೂಜಾರಿ (37)ಮೃತ ದುರ್ದೈವಿ. ಹರೀಶ್ ಪೂಜಾರಿ ಮೀನು ಹಿಡಿಯಲು ಮೂವರು ಸ್ನೇಹಿತರ ಜೊತೆ ಕಾಳಾವಾರ ದೇವಸ್ಥಾನದ ಸಮೀಪದ ಕೆರೆಗೆ ತೆರಳಿದ್ದು ಈ ವೇಳೆ ಮೀನು ಹಿಡಿಯಲು ಹರೀಶ್ ನೀರಿಗಿಳಿದಾಗ ನೀರಿನಲ್ಲಿ ಮುಳುಗಿದ್ದಾರೆ.

ಈ ಬಗ್ಗೆ ಸ್ನೇಹಿತರು ಸ್ಥಳೀಯರಿಗೆ ವಿಚಾರ ತಿಳಿಸಿದ್ದು, ರಾತ್ರಿಯೇ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರ ಆಗಮಿಸಿ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಈ ವೇಳೆ ಮೃತದೇಹ ಪತ್ತೆಯಾಗಿದೆ.ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!