Thursday, June 4, 2026
Homeತಾಜಾ ಸುದ್ದಿಕುಂದಾಪುರ: ಚಪ್ಪರ ಹಾಕುತ್ತಿದ್ದಾಗ ಅಡಿಕೆ ಮರದ ಕಂಬ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ಚಪ್ಪರ ಹಾಕುತ್ತಿದ್ದಾಗ ಅಡಿಕೆ ಮರದ ಕಂಬ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕುಂದಾಪುರ: ಪೂಜಾ ಕಾರ್ಯಕ್ರಮವೊಂದಕ್ಕೆ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬ ವ್ಯಕ್ತಿಯೊಬ್ಬರ ಕುತ್ತಿಗೆಗೆ ಬಿದ್ದು ಮೃತಪಟ್ಟಿರುವ ಘಟನೆ ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಅನಗಳ್ಳಿಬೈಲು ಎಂಬಲ್ಲಿ ನಡೆದಿದೆ. ಮೃತರನ್ನು ರಾಮಚಂದ್ರ ಬಂಡಾರ್ಕರ್ (58) ಎಂದು ತಿಳಿಸಲಾಗಿದೆ.

ಪೂಜಾ ಕಾರ್ಯಕ್ರಮದ ನಿಮಿತ್ತ ಚಪ್ಪರ ಹಾಕುತ್ತಿದ್ದ ವೇಳೆ ಅಡಿಕೆ ಮರದ ಕಂಬವು ಮೇಲಿಂದ ಜಾರಿದಾಗ ಅದನ್ನು ತಡೆಯಲು ಹೋದಾಗ ಕಾಲು ಎಡವಿ ಕೆಳಗೆ ಬಿದ್ದಾಗ ಅಡಿಕೆ ಮರದ ಕಂಬ ರಾಮಚಂದ್ರ ಅವರ ಕುತ್ತಿಗೆಗೆ ಬಿದ್ದು ಗಂಭೀರ ಗಾಯಗೊಂಡ ಅವರನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!