Thursday, June 4, 2026
Homeಕರಾವಳಿಬೆಳ್ತಂಗಡಿ; ಹೈ ಟೆನ್ಶನ್ ವಯರ್ ಗೆ ಅಲ್ಯುಮಿನಿಯಂ ಏಣಿ ತಾಗಿ ವ್ಯಕ್ತಿ ಸಾವು

ಬೆಳ್ತಂಗಡಿ; ಹೈ ಟೆನ್ಶನ್ ವಯರ್ ಗೆ ಅಲ್ಯುಮಿನಿಯಂ ಏಣಿ ತಾಗಿ ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ; ಹೈ ಟೆನ್ಶನ್ ವಯರ್ ಗೆ ಅಲ್ಯುಮೀನಿಯಂ ಏಣಿ ತಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಾಲು ಗ್ರಾಮದ  ಸುರುಳಿ ಎಂಬಲ್ಲಿ  ನಡೆದಿದೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ  ನಿವಾಸಿ ಅಂಗಾರ(58) ಮೃತ ದುರ್ದೈವಿ.

ಕೃಷಿ ಕೂಲಿ ಕಾರ್ಮಿಕರಾಗಿರುವ ಅಂಗಾರ ಅವರು ಕೆಲಸ ಮಾಡುತ್ತಿದ್ದ ವೇಳೆ ಇವರು ಅಲ್ಯುಮಿನಿಯಂ ಏಣಿಯನ್ನು ಹಿಡಿದು ಕೊಂಡು ಹೋಗುತ್ತಿದ್ದಾಗ ಮೇಲೆ ಹಾದು ಹೋಗುತ್ತಿದ್ದ  ಹೈ ಟೆನ್ಶನ್ ವಯರ್ ಅನ್ನು ಸ್ಪರ್ಶಿಸಿದೆ. ಪರಿಣಾಮ ಸ್ಥಳದಲ್ಲೇ  ಅವರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಪತ್ನಿ, 4 ಹೆಣ್ಣು ಮಕ್ಕಳನ್ನು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!