Thursday, June 4, 2026
Homeಕರಾವಳಿಬೆಳ್ತಂಗಡಿ; ಅಲ್ಯೂಮಿನಿಯಂ ದೋಂಟಿ ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಾಗಿ ವ್ಯಕ್ತಿ ಸಾವು

ಬೆಳ್ತಂಗಡಿ; ಅಲ್ಯೂಮಿನಿಯಂ ದೋಂಟಿ ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಾಗಿ ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ; ಅಲ್ಯೂಮಿನಿಯಂ ದೋಂಟಿ ಆಕಸ್ಮಿಕವಾಗಿ ವಿದ್ಯುತ್‌ ತಂತಿಗೆ ತಾಗಿ ಕೃಷಿಕರೊಬ್ಬರು ಸಾವನ್ನಪ್ಪಿದ ಘಟನೆ ಕಲ್ಮಂಜ ಗ್ರಾಮದ ಅಂಬಟೆ ಮನೆಯಲ್ಲಿ ನಡೆದಿದೆ. ಶಶಿಧರನ್ ನಾಯರ್  (68) ಮೃತ ಕೃಷಿಕ.

ಶಶಿಧರನ್ ಅವರು ಮನೆಯ ಹತ್ತಿರ ಇರುವ ತೋಟದ ತೆಂಗಿನ ಮರದಿಂದ ಎಳೆನೀರು ತೆಗೆಯಲೆಂದು ಮನೆಯಲ್ಲಿದ್ದ ಅಲ್ಯೂಮಿನಿಯಂ ದೋಂಟಿಯನ್ನು ತೆಗೆದುಕೊಂಡು ಹೋಗಿದ್ದು ಹೋದ ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಬೊಬ್ಬೆ ಹಾಕಿದಂತೆ ಶಬ್ದ ಕೇಳಿದೆ. ಈ ವೇಳೆ ಪತ್ನಿ ಹಾಗೂ ಈ ವೇಳೆ ಮನೆಯಲ್ಲಿದ್ದ ಆಂಟನಿ ಎಂಬವರು  ಓಡಿಹೋಗಿ ನೋಡಿದಾಗ ಶಶಿಧರ‌ನ್ ಕುಸಿದು ಬಿದ್ದಿದ್ದರು.   ಗಾಯಾಳುವನ್ನು ತಕ್ಷಣ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಮೃತರ ಪತ್ನಿ  ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!