- Advertisement -
![]()
- Advertisement -
ಉಡುಪಿ; ಟೆಂಪೋ ಬೈಕ್ ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಇಂದು ಬೆಳಗ್ಗೆ ಕಟಪಾಡಿ ಸಮೀಪದ ಏಣಗುಡ್ಡೆ ಗ್ರಾಮದ ಥಂಡರ್ ಬೇ ಹಾಲ್ ಎದುರು ನಡೆದಿದೆ.
ಶ್ರೀನಿವಾಸ ರಾವ್ (50) ಮೃತ ಬೈಕ್ ಸವಾರ.
ಕಟಪಾಡಿ ಕಡೆಯಿಂದ ಶಂಕರಪುರ ಕಡೆಗೆ ಬರುತ್ತಿದ್ದ ಟೆಂಪೊ ಎದುರಿನಿಂದ ಅಂದರೆ ಶಂಕರಪುರ ಕಡೆಯಿಂದ ಕಟಪಾಡಿ ಕಡೆಗೆ ಪುರೋಹಿತ ಕೆಲಸಕ್ಕಾಗಿ ಹೋಗುತ್ತಿದ್ದ ಶ್ರೀನಿವಾಸ ರಾವ್ ಅವರ ಬೈಕಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


