Saturday, June 27, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ವಿಕೃತ ಕಾಮಿ ಹುಚ್ಚಾಟ; ಹೆಣ್ಮಕ್ಕಳ ಒಳ ಉಡುಪು ಕದ್ದು, ಬಾಗಿಲಿನ ಲಾಕರ್ ಗೆ...

ಮಂಗಳೂರು; ಉಳ್ಳಾಲದಲ್ಲಿ ವಿಕೃತ ಕಾಮಿ ಹುಚ್ಚಾಟ; ಹೆಣ್ಮಕ್ಕಳ ಒಳ ಉಡುಪು ಕದ್ದು, ಬಾಗಿಲಿನ ಲಾಕರ್ ಗೆ ಕಾಂಡೋಮ್ ಸಿಕ್ಕಿಸಿದ ಪಾಪಿ

- Advertisement -
- Advertisement -

ಮಂಗಳೂರಿನ ಉಳ್ಳಾಲದಲ್ಲಿ ವಿಕೃತ ಕಾಮಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ಹೆಣ್ಮಕ್ಕಳ ಒಳ ಉಡುಪು ಕದ್ದು, ಬಾಗಿಲಿನ ಲಾಕರ್ ಗೆ ಕಾಂಡೋಮ್ ಸಿಕ್ಕಿಸಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದಾನೆ.

ಉಳ್ಳಾಲ ಬೈಲಿನ ಗೇರು ಕೃಷಿ ಸಂಶೋಧನಾ ಕೇಂದ್ರದ ಬಳಿಯ ಸುಂದರ್ ಎನ್ನುವವರ ಮನೆ ಮೇಲಿರುವ ಬಾಡಿಗೆ
ಮನೆಯಲ್ಲಿ ಮಹಿಳೆ ಮತ್ತು ಆಕೆಯ ಮಗಳ ಉಡುಪವನ್ನು ವಿಕೃತ ಕಾಮಿ ಕದ್ದೊಯ್ದಿದ್ದಾನೆ. ಮಹಿಳೆಯರ ಬೆಲೆ ಬಾಳುವ ಸಲ್ವಾರ್, ಮತ್ತು ಒಳ ಉಡುಪುಗಳನ್ನು ಬಾಲ್ಕನಿ ಮತ್ತು ಟೆರೇಸ್ ಮೇಲೆ ನಿನ್ನೆ ಸಂಜೆ ಒಣ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಾಡಿಗೆ ಮನೆ ಯಜಮಾನ ಎದ್ದಾಗ ಮುಖ್ಯ ಬಾಗಿಲಿನ ಲಾಕರ್ ಹೆ  ಕಾಂಡೋಮ್ ಸಿಕ್ಕಿಸಿರುವುದು ಬೆಳಕಿಗೆ ಬಂದಿದೆ.

7 ಸಾವಿರ ಬೆಲೆ ಬಾಳುವ ಉಡುಪನ್ನು ಕಳವುಗೈಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಮೇಲ್ನೋಟಕ್ಕೆ ವಿಕೃತಕಾಮಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!