Saturday, April 27, 2024
Homeತಾಜಾ ಸುದ್ದಿವಿಧಾನಸಭೆ ಚುನಾವಣೆ ಕಾರ್ಯಕ್ಕೆ ಸಾವಿರಾರು ಬಸ್ ಗಳ ನಿಯೋಜನೆ; ಊರಿಗೆ ಹೋಗಲು ಬಸ್ ಗಳಿಲ್ಲದೇ ಸಾರ್ವಜನಿಕರ...

ವಿಧಾನಸಭೆ ಚುನಾವಣೆ ಕಾರ್ಯಕ್ಕೆ ಸಾವಿರಾರು ಬಸ್ ಗಳ ನಿಯೋಜನೆ; ಊರಿಗೆ ಹೋಗಲು ಬಸ್ ಗಳಿಲ್ಲದೇ ಸಾರ್ವಜನಿಕರ ಪರದಾಟ

spot_img
- Advertisement -
- Advertisement -

ಬೆಂಗಳೂರು : ನಾಳೆ ವಿಧಾನಸಭೆ ಚುನಾವಣೆ ಹಿನ್ನೆಲೆ  ಬಹುತೇಕರು ಬೆಂಗಳೂರಿನಿಂದ ಮತದಾನಕ್ಕಾಗಿ ಊರ ಕಜೆ ಹೆಜ್ಜೆ ಹಾಕುತ್ತಿದ್ದಾರೆ, ಆದರೆ ಹೆಚ್ಚಿನವರು ಬಸ್ ಗಳಿಲ್ಲದೇ ಪರದಾಡುತ್ತಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಕಾರ್ಯಕ್ಕೆ ಸಾವಿರಾರು ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಗಳನ್ನು ಪಡೆದುಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಮತದಾನಕ್ಕೆ ಊರಿಗೆ ಹೋಗುವ ಪ್ರಯಾಣಿಕರು ಬೆಂಗಳೂರಿನಲ್ಲಿ ಬಸ್ ಇಲ್ಲದೇ ಪರದಾಡುವಂತಾಗಿದೆ.

ಕೆಎಸ್ ಆರ್ ಟಿಸಿ ಬಸ್ ಗಳ ಸಂಖ್ಯೆ ಕಡಿಮೆ ಇರುವ ಕಾರಣ ಖಾಸಗಿ ಬಸ್ ಗಳ ಮೊರೆ ಹೋಗಿರುವ ಪ್ರಯಾಣಿಕರು ದುಪ್ಪಟ್ಟು ದರ ಕೊಟ್ಟು ತಮ್ಮ ಊರಿಗೆ ಹೋಗುತ್ತಿದ್ದಾರೆ. ಕೆಲವರು ಈಗಾಗಲೇ ಬುಕ್ ಮಾಡಿದ್ದಾರೆ. ಇದರ ದುಬಾರಿ ದರ ಕೊಟ್ಟು ಹೋಗದವರು ಕೆಎಸ್ ಆರ್ ಟಿಸಿ ಬಸ್ಸಿನ ಮೊರೆ ಹೋಗಿದ್ದಾರೆ. ಮಹಿಳೆಯರು, ಮಕ್ಕಳು, ವಯೋವೃದ್ಧರು ಬಸ್ ಸಿಗದೇ ಪರದಾಡುವಂತಾಗಿದೆ.

- Advertisement -
spot_img

Latest News

error: Content is protected !!