Saturday, June 6, 2026
Homeಕರಾವಳಿಕಾಸರಗೋಡುಕಾಸರಗೋಡು;ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು

ಕಾಸರಗೋಡು;ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಸಾವು

- Advertisement -
- Advertisement -

ಕಾಸರಗೋಡು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಬಾವಿಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಘಟನೆ ಕಾಸರಗೋಡಿನ ಎನ್ನಪ್ಪರದಲ್ಲಿ ನಡೆದಿದೆ. ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.

ಶನಿವಾರ ರಾತ್ರಿ ಎನ್ನಪ್ಪರದಲ್ಲಿ ಫುಟ್‌ ಬಾಲ್‌ ಆಡುತ್ತಿರುವಾಗ ಜೊತೆಗೆ ಜೂಜಾಟವನ್ನು ಆಡಿದ್ದಾರೆ. ಇದರಲ್ಲಿ ವಿಷ್ಣು ಅವರು ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರ ಏಕಾಏಕಿ ದಾಳಿ ಮಾಡಿದ ಭೀತಿಯಿಂದ ಎಲ್ಲರೂ ಓಡಿದ್ದಾರೆ. ಪೊಲೀಸರನ್ನು ನೋಡಿ ಓಡುವಾಗ ಕತ್ತಲಿನಲ್ಲಿ ವಿಷ್ಣು ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!