Saturday, June 6, 2026
Homeಕರಾವಳಿವಿಟ್ಲ: ತೆಂಗಿನ ಮರದಿಂದ ಬಿದ್ದು ಕೃಷಿಕನ ಸಾವು

ವಿಟ್ಲ: ತೆಂಗಿನ ಮರದಿಂದ ಬಿದ್ದು ಕೃಷಿಕನ ಸಾವು

- Advertisement -
- Advertisement -

ವಿಟ್ಲ: ಕೃಷಿ ಕಾರ್ಮಿಕರೊಬ್ಬರು ತೆಂಗಿನಮರದಿಂದ ಕಾಯಿ ಕೀಳುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವಿಟ್ಲದಲ್ಲಿ ನಡೆದಿದೆ.


ಮೃತರು ಪೆರಾಜೆ ನಡುಪಾಲು ನಿವಾಸಿ ಜನಾರ್ಧನ ನಾಯಕ(48) ಎಂದು ಹೇಳಲಾಗಿದೆ.
ಜ.15 ರಂದು ನೆಟ್ಲಮುಡ್ನೂರು ಗ್ರಾಮದ ಗಣೇಶನಗರ ಸದಾಶಿವ ಭಟ್ಟ ಅವರ ತೋಟದಲ್ಲಿ ತೆಂಗಿನಕಾಯಿ ಕೀಳುತಿದ್ದ ಜನಾರ್ಧನ ಅವರು 15 ಅಡಿ ಎತ್ತರದಿಂದ ಆಕಸ್ಮಿಕವಾಗಿ ಬಿದ್ದು ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ತೀವ್ರ ಗಾಯವಾಗಿ ಮಂಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಧಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ತಿಳಿದುಬಂದಿದೆ..
ಪ್ರಕರಣ ವಿಟ್ಲ ಠಾಣೆಯಲ್ಲಿ ದಾಖಲಾಗಿದೆ.

- Advertisement -

Latest News

error: Content is protected !!