Friday, June 5, 2026
Homeಅಪರಾಧತೋಟದಲ್ಲಿದ್ದ ಅಡಿಕೆ ಕಳವು- ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ತೋಟದಲ್ಲಿದ್ದ ಅಡಿಕೆ ಕಳವು- ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ವಿಟ್ಲ: ತುಂಬಿಸಿ ಇಟ್ಟಿದ್ದ ಗೋಣಿ ಚೀಲದಿಂದ ಹಸಿ ಅಡಿಕೆಯನ್ನು ವ್ಯಕ್ತಿಯೊಬ್ಬ ಕಳವುಗೈದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಡ್ಕಿದು ಗ್ರಾಮದ ಕೊಂಕೋಡಿ ಎಂಬಲ್ಲಿ ತಿರುಮಲೇಶ್ವರ ಭಟ್ ಎಂಬವರು ಜ.17 ರಂದು ತನ್ನ ತೋಟದ ಹಣ್ಣು ಅಡಿಕೆಯನ್ನು ಹೆಕ್ಕಿ ಒಂದು ಚೀಲದಲ್ಲಿ ತುಂಬಿಸಿ ಇಟ್ಟಿದ್ದರು. ಅವರು ವಾಪಸ್ ತೋಟಕ್ಕೆ ಅಡಿಕೆಯನ್ನು ತರಲು ಹೋದಾಗ ಅದೇ ಗ್ರಾಮದ ಮೋಹನ್ ಎಂಬುವವರು ತುಂಬಿಸಿ ಇಟ್ಟಿದ ಗೋಣಿ ಚೀಲದಿಂದ ಅಡಿಕೆ ಹಣ್ಣನ್ನು ತುಂಬಿಸಿಕೊಂಡು ಹೋಗುತ್ತಿದ್ದರು.

ಈ ವೇಳೆ ತಿರುಮಲೇಶ್ವರ ಭಟ್ ಬೊಬ್ಬೆ ಹಾಕಿದರೂ ಓಡಿ ಹೋಗಿದ್ದಾನೆ. ಸುಮಾರು 2000 ರೂಪಾಯಿಯ ಅಡಿಕೆಗಳನ್ನು ಕದ್ದಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!