Thursday, May 16, 2024
Homeಅಪರಾಧಕಾರ್ಕಳ: ಮಹಿಳೆಯೊಬ್ಬರ ಮಾನಹಾನಿ ಪ್ರಕರಣ- ಆರೋಪಿಗೆ ಜೈಲು ಶಿಕ್ಷೆ

ಕಾರ್ಕಳ: ಮಹಿಳೆಯೊಬ್ಬರ ಮಾನಹಾನಿ ಪ್ರಕರಣ- ಆರೋಪಿಗೆ ಜೈಲು ಶಿಕ್ಷೆ

spot_img
- Advertisement -
- Advertisement -

ಕಾರ್ಕಳ: ಮಹಿಳೆಯೊಬ್ಬರ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬ ತಪಿತಸ್ಥನೆಂದು ಕಾರ್ಕಳ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಚೇತನಾ ಎಸ್.ಎಫ್ ತೀರ್ಪು ನೀಡಿ ಶಿಕ್ಷೆ ಪ್ರಮಾಣವನ್ನು ವಿಧಿಸಿದ್ದಾರೆ.

2017 ಏಪ್ರಿಲ್ 27 ರ ಸಂಜೆ 6.30ರ ವೇಳೆಗೆ ಈ ಘಟನೆಯು ಮಾಳದ ಪೇರಡ್ಕದ ಗುಡ್ಡೆಮನೆ ಎಂಬಲ್ಲಿ ನಡೆದಿದೆ. ಅದೇ ಗ್ರಾಮದ ಪೇರಡ್ಕದ ನಿವಾಸಿ ವಿಜಯಪೂಜಾರಿ ಎಂಬಾತನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ಕೆಎ20 ಇಜಿ 8610 ನಂಬ್ರದ ಬೈಕ್‌ನಲ್ಲಿ ಬಂದ ಆರೋಪಿ ವಿಜಯಪೂಜಾರಿ, ಮನೆಯ ಗೇಟಿನ ಮುಂದೆ ಗಂಡ ಸುರೇಶ್ ಪೂಜಾರಿ, ಮಕ್ಕಳಾದ ಸುಶ್ಮಿತಾ ಮತ್ತು ಸುರಕ್ಷಾ ಎಂಬವರೊಂದಿಗೆ ನಿಂತುಕೊಂಡಿದ್ದ ಸುಜಾತ ಪೂಜಾರಿಯನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆಯೊಡ್ಡಿದಲ್ಲದೇ, ಎಡಭುಜಕ್ಕೆ ಕೈಹಾಕಿ ರಭಸದಿಂದ ದೂಡಿ ಮಾನಹಾನಿ ಮಾಡಿರುತ್ತಾನೆ.

ಈ ಕುರಿತು ಅಂದಿನ ಕಾರ್ಕಳ ಗ್ರಾಮಾಂತರ ಪಿಎಸೈ ಪುರುಷೋತ್ತಮ ಇವರು ಆರೋಪಿಯ ವಿರುದ್ಧ ಕಾರ್ಕಳ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.

ಈ ಹಿಂದಿನ ಸರಕಾರ ಪರ ಅಭಿಯೋಜಕರಾಗಿದ್ದ ಜಗದೀಶ್‌ಕೃಷ್ಣ ಜಾಲಿ ಪ್ರಕರಣದ ಸಾಕ್ಷಿದಾರರ ವಿಚಾರಣೆಯನ್ನು ಮಂಡಿಸಿದ್ದರು. ನಂತರದಲ್ಲಿ ಸರಕಾರ ಪರ ಅಭಿಯೋಜಕರಾದ ಶೋಭಾ ಮಹಾದೇವ ವಾದ ಮಂಡಿಸಿದರು.ವಾದ-ಪ್ರತಿವಾದ ಆಳಿಸಿದ ನಾಯಾಧೀಶೆ ಚೇತನಾ ಎಸ್.ಎಫ್ ಅವರು ಆರೋಪಿ ವಿಜಯಪೂಜಾರಿಗೆ ರೂ.4 ಸಾವಿರ ದಂಡ, ಒಂದು ವರ್ಷದ ಸಾದಾ ಕಾರಗೃಹ ವಾಸ ಶಿಕ್ಷೆ ಮತ್ತು ದಂಡ ತೆರಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಸಜೆ ಶಿಕ್ಷೆಯನ್ನು ವಿಧಿಸಿದ್ದಾರೆ.

- Advertisement -
spot_img

Latest News

error: Content is protected !!