Friday, June 5, 2026
Homeಕರಾವಳಿಉಡುಪಿಉಡುಪಿ: ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ನೇಣಿಗೆ ಶರಣು

ಉಡುಪಿ: ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ನೇಣಿಗೆ ಶರಣು

- Advertisement -
- Advertisement -

ಉಡುಪಿ: ಮೀನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ನೇಣಿಗೆ ಶರಣಾಗಿರುವ ಕಾಪುವಿನಲ್ಲಿ ನಡೆದಿದೆ.ಉಳಿಯಾರಗೋಳಿ ಗ್ರಾಮದ ರಮೇಶ್‌ (49) ಮೃತ ವ್ಯಕ್ತಿ.

ರಮೇಶ್ ಅನಾರೋಗ್ಯದಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೀನುಗಾರಿಕೆ ಮಾಡುತ್ತಿದ್ದ ರಮೇಶ್ ಅವರಿಗೆ 2 ತಿಂಗಳ ಹಿಂದೆ ಎದೆನೋವು ಕಾಣಿಸಿಕೊಂಡಿತ್ತು. ಹಾಗಾಗಿ ಕಾಪುವಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.ಬುಧವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಹಾಲ್‌ನಲ್ಲಿ ಮಲಗಿದ್ದವರು ಮಧ್ಯರಾತ್ರಿ ಕಾಣೆಯಾಗಿದ್ದರು. ಪತ್ನಿ ಹುಡುಕಾಡಿದಾಗ ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಕೂಡಲೇ ಅವರನ್ನು ಪತ್ನಿ ಮತ್ತು ಮಗ ಕೆಳಗಿಳಿಸಿ ಟಿಎಂಎ ಪೈ ಆಸ್ಪತ್ರೆ ಉಡುಪಿಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸದ ವೈದ್ಯರು ರಮೇಶ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಪುತ್ರ ರೋಷನ್‌ ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!