- Advertisement -
![]()
- Advertisement -
ಬೆಳಗಾವಿ : ತನಗೆ ಮದುವೆ ಆಗಲಿಲ್ಲ ಅಂತಾ ಮನನೊಂದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕಬ್ಬೂರು ಪಟ್ಟಣದಲ್ಲಿ ನಡೆದಿದೆ.
ಮಹೇಶ ಕೆಂಪಣ್ಣ ಮುತಾಲಿಕ(24) ಆತ್ಮಹತ್ಯೆಗೆ ಶರಣಾದ ಯುವಕ. ತನ್ನ ವಯಸ್ಸಿನ ಸ್ನೇಹಿತರಿಗೆಲ್ಲ ಮದುವೆಯಾಯ್ತು ನನಗೆ ಮಾತ್ರ ಮದುವೆ ಆಗಲಿಲ್ಲವೆಂದು ಕೊರಗುತ್ತಿದ್ದ ಮಹೇಶ, ಯಾರಿಗೂ ಹೇಳದೆ ಗದ್ದೆಗೆ ತೆರಳಿ ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -


