Monday, April 29, 2024
Homeತಾಜಾ ಸುದ್ದಿಫೇಸ್ಬುಕ್ ನಲ್ಲಿ ಹುಟ್ಟಿಕೊಂಡ ಸ್ನೇಹ ಕಳ್ಳತನದಲ್ಲಿ ಅಂತ್ಯ

ಫೇಸ್ಬುಕ್ ನಲ್ಲಿ ಹುಟ್ಟಿಕೊಂಡ ಸ್ನೇಹ ಕಳ್ಳತನದಲ್ಲಿ ಅಂತ್ಯ

spot_img
- Advertisement -
- Advertisement -

ಮೈಸೂರು: ಸೋಷಿಯಲ್ ಮೀಡಿಯಾದಲ್ಲಿ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಸಾಕಾಗೋದಿಲ್ಲ. ಅದರಲ್ಲೂ ಹೆಣ್ಣು ಮಕ್ಕಳು ಎಷ್ಟು ಕೇರ್ ಫುಲ್ ಆಗಿದ್ರೂ ಕಡಿಮೆನೇ. ಹೀಗೆ ಫೇಸ್ ಬುಕ್ ನಲ್ಲಿ ಅಪರಿಚಿತನೊಬ್ಬನನ್ನು ನಂಬಿ ಮಹಿಳೆಯೊಬ್ಬಳು ಮೋಸ ಹೋಗಿದ್ದಾರೆ.

ಬಿಎಂಶ್ರೀ ನಗರದ ಮಹಿಳೆಯೊಬ್ಬರಿಗೆ ಫೇಸ್​ಬುಕ್​ನಲ್ಲಿ ದೇವರಾಜು ಎಂಬಾತ ಪರಿಚಯವಾಗಿದ್ದ. ಆತ ಚಾಟ್​ ಮಾಡುತ್ತಾ ಗೆಳೆತನ ಬೆಳೆಸಿಕೊಂಡಿದ್ದ. ಇದೇ ಸ್ನೇಹ ಭೇಟಿವರೆಗೂ ಬಂದಿದೆ. ಹೀಗೆ ಭೇಟಿಯಾಗಲು ಬಂದಾಗ ಆತ ಮಹಿಳೆಗೆ ನಿದ್ದೆ ಮಾತ್ರೆ ಕೊಟ್ಟಿದ್ದಾನೆ. ಬಳಿಕ ಎಟಿಎಂ ಕಾರ್ಡ್​, ಚಿನ್ನ ಮತ್ತು ನಗದು ದೋಚಿದ್ದಾನೆ. ಬಳಿಕ ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರ ನೀಡಿದ್ದಾರೆ.

ಮಹಿಳೆ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದ ಪೊಲೀಸರು ಮೇಟಗಳ್ಳಿಯಲ್ಲಿ ದೇವರಾಜು ನನ್ನು ಬಂಧಿಸಿದ್ದಾರೆ. ಬಂಧಿತನಿಂದ 20 ಗ್ರಾಂ ಚಿನ್ನ, ₹40 ಸಾವಿರ ನಗದು, ಎಟಿಎಂ ಕಾರ್ಡ್​ ಮತ್ತು ಬೈಕ್​ ವಶಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!