ಗುಜರಾತ್: ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಟೈಂ ಪಾಸ್ ಮಾಡಲು ಜನರು ಆನ್ಲೈನ್ ಗೇಮ್ ಮೊರೆ ಹೋಗಿದ್ದಾರೆ. ಆನ್ಲೈನ್ ಲುಡೋ ಆಡ್ತಿದ್ದ ಮಹಿಳೆಯೊಬ್ಬಳು ಆಸ್ಪತ್ರೆ ಸೇರುವಂತಾಗಿದೆ. ಘಟನೆ ವಡೋದರಾದಲ್ಲಿ ನಡೆದಿದೆ.
ಪತಿ ಎಲೆಕ್ಟ್ರಾನಿಕ್ ಅಂಗಡಿಯೊಂದರಲ್ಲಿ ಕೆಲಸದಲ್ಲಿದ್ದಾನೆ. 24 ವರ್ಷದ ಪತ್ನಿ ಕೂಡ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದಾಳೆ. ಸದ್ಯ ಲಾಕ್‌ಡೌನ್ ಹಿನ್ನೆಲೆ ಇಬ್ಬರಿಗೂ ಕೆಲಸವಿಲ್ಲದೆ ಮನೆಯಲ್ಲೆ ಇದ್ದಾರೆ. ಲಾಕ್‌ಡೌನ್ ಇರೋದ್ರಿಂದ ಪತಿ ಮನೆಯಿಂದ ಹೊರಗೆ ಹೋಗೋದನ್ನ ತಪ್ಪಿಸುವ ಉದ್ದೇಶದಿಂದ ಪತ್ನಿ ಲುಡೋ ಆಡುವ ಬಗ್ಗೆ ಗಂಡನ ಜೊತೆ ಕೇಳಿಕೊಂಡಿದ್ದಾಳೆ. ಇದಕ್ಕೆ ಪತಿ ಕೂಡ ಒಪ್ಪಿಕೊಂಡಿದ್ದಾನೆ. ಇಬ್ಬರೂ ನಿರಂತರ ಲುಡೋ ಆಟವನ್ನ ಆಡಿದ್ದಾರೆ. ಆದ್ರೆ ಪತ್ನಿ ನಿರಂತರವಾಗಿ ಗಂಡನನ್ನ ಲುಡೋದಲ್ಲಿ ಸೋಲಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ, ಪತ್ನಿಯ ಜೊತೆ ವಾಗ್ವಾದ್ದಕ್ಕೆ ಇಳಿದಿದ್ದಾನೆ. ಇದು ನಂತರ ಇವರಿಬ್ಬರ ನಡುವೆ ಕದನಕ್ಕೆ ಕಾರಣವಾಗಿದೆ. ಗಂಡ ಕೋಪದಿಂದ ಹೆಂಡತಿಗೆ ಹೊಡೆದಿದ್ದಾನೆ. ಇದರ ಪರಿಣಾಮ ಪತ್ನಿಯ ಬೆನ್ನು ಮೂಳೆ ಮುರಿದಿದೆ.
ಸಹಾಯವಾಣಿಗೆ ಕರೆ ಮಾಡಿದ ಪತ್ನಿ ಆಸ್ಪತ್ರೆ ಸೇರಿದ್ದಾಳೆ. ಚಿಕಿತ್ಸೆ ಮುಂದುವರೆದಿದೆ. ಅಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಪತ್ನಿ ಪತಿ ಬಳಿ ಹೋಗದೆ ತನ್ನ ಪೋಷಕರ ಮನೆಯಲ್ಲಿದ್ದಳಂತೆ. ಬಳಿಕ ಸಮಾಲೋಚಕರು ಇವರಿಬ್ಬರನ್ನ ಒಂದೆ ಕಡೆ ಕೂರಿಸಿ ಸಲಹೆಗಳನ್ನ ಕೊಟ್ಟಿದ್ದರಂತೆ. ಅಲ್ಲದೆ ಪತ್ನಿ ಮೇಲೆ ದೌರ್ಜನ್ಯ ನಡೆಸೋದು ಅಪರಾಧ ಎಂದು ಪತಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಸದ್ಯ ಪತ್ನಿ ಕೂಡ ಯಾವುದೇ ದೂರು ನೀಡದ ಹಿನ್ನೆಲೆ ಇಬ್ಬರಿಗೂ ಮನವರಿಕೆ ಮಾಡಿ, ಸುಖವಾ ಬಾಳಿ ಎಂದು ಸಮಾಲೋಚಕರು ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.