Saturday, December 14, 2024
Homeಆರಾಧನಾಇಂದಿನ ವಿಶೇಷ : ಶ್ರೀಮದ್ ಆದಿ ಶಂಕರಾಚಾರ್ಯರ ಸಾಧನೆಗಳ ಒಂದು ನೋಟ

ಇಂದಿನ ವಿಶೇಷ : ಶ್ರೀಮದ್ ಆದಿ ಶಂಕರಾಚಾರ್ಯರ ಸಾಧನೆಗಳ ಒಂದು ನೋಟ

spot_img
- Advertisement -
- Advertisement -

 ಇಂದು ಶಂಕರಾಚಾರ್ಯ ಜಯಂತಿ. ಈ ಸಮಯದಲ್ಲಿ ಅವರ ಅಪಾರ ಸಾಧನೆಯನ್ನು ಮೆಲುಕು ಹಾಕೋಣ ಬನ್ನಿ.ಅದ್ವೈತ ತತ್ವದ ಪ್ರತಿಪಾದಕ ಶ್ರೀ ಶಂಕರಾಚಾರ್ಯರ ಅವರ ಕೇರಳದ ಕಾಲಟಿಯಲ್ಲಿ ಶಿವಗುರು ಮತ್ತು ಆರ್ಯಾಂಬ ದಂಪತಿಗಳಿಗೆ ಕ್ರಿ.ಶ.788ರಲ್ಲಿ ಜನಿಸಿದರು.

ಶಂಕರಾಚಾರ್ಯರ ಜನನ ಮತ್ತು ಬಾಲ್ಯ : ಬಾಲ್ಯದಲ್ಲೇ ಅಧ್ಯಾತ್ಮಿಕ ಒಲವು ಹೊಂದಿದ್ದ ಶ್ರೀಗಳು, ತಮ್ಮ ತಾಯಿಯ ಅನುಮತಿ ಮೇರೆಗೆ ತಮ್ಮ ಎಂಟನೆ ವಯಸ್ಸಿನಲ್ಲಿಯೇ ಗೋವಿಂದ ಪೂಜ್ಯಪಾದಾಚಾರ್ಯರನ್ನು ಭೇಟಿಯಾಗಿ ಅವರಿಂದ ಉಪದೇಶ ಪಡೆದು ಶಂಕರಾಚಾರ್ಯರು ಸನ್ಯಾಸದೀಕ್ಷೆ ಪಡೆದರು. ಸನ್ಯಾಸತ್ವ ಸ್ವೀಕರಿಸಿದ ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಪ್ರಚಾರಕ್ಕಾಗಿ ದೇಶದ ವಿವಿಧೆಡೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ವೇದಗಳ ಮೂಲಕ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂಬುವುದನ್ನು ಸಾಬೀತುಪಡಿಸಿದರಲ್ಲದೆ, ತಮ್ಮ 32 ವರ್ಷಗಳ ಜೀವಿತ ಅವಧಿಯಲ್ಲಿ ಅನೇಕ ಮಹಾನ್‌ ಗ್ರಂಥಗಳನ್ನು ರಚಿಸಿರುವುದು ವಿಶೇಷವಾಗಿದೆ.

ಕೇವಲ ತಮ್ಮ 32 ವರ್ಷ ವಯಸ್ಸಿನಲ್ಲಿ ಸಮಗ್ರ ಭಾರತ ದೇಶವನ್ನು ಪರ್ಯಟನೆ ಮಾಡಿ ಅದ್ವೈತ ಸಿದ್ಧಾಂತವನ್ನು ಎಲ್ಲಡೆ ಪಸರಿಸಿ ತಮ್ಮ ಹೆಸರನ್ನು ಹಾಗೂ ತಮ್ಮ ಜ್ಞಾನವನ್ನು ಎಲ್ಲಾ ಕಾಲಕ್ಕೂ ನಿಲುಕವಂತೆ ಮಾಡಿದ ಮಹಾನ್‌ ಜ್ಞಾನಿಗಳು ಕೂಡ ಹೌದು. 8 ನೇ ಶತಮಾನದಲ್ಲಿದ್ದ ಆದಿ ಶಂಕರಾಚಾರ್ಯರನ್ನು ನಾವು ಭಾರತದ ತತ್ವಜ್ಞಾನಿ, ಜಗತ್ಗುರು ಅಂತ ಕೂಡ ಕರೆಯುತ್ತೇವೆ. ಅವರು ಅಂದು ನಮಗೆ ಹಾಕಿಕೊಟ್ಟ ಮಾರ್ಗದಲ್ಲಿ ನಾವಿಂದು ಅನುಸರಣೆ ಮಾಡುತ್ತಿದ್ದೇವೆ.

ಆದಿ ಶಂಕರಾಚಾರ್ಯರುರನ್ನು ನಾಡಿನ ಒಬ್ಬ ಶ್ರೇಷ್ಠ ಭಾರತೀಯ ದಾರ್ಶನಿಕರಾಗಿ ನಮ್ಮೆಲ್ಲರ ಮುಂದೆ ಕಾಣಿಸಿಕೊಂಡಿದ್ದಾರೆ ಕೂಡ. ಆದಿ ಶಂಕರಾಚಾರ್ಯರು ಬಹುಮುಖ್ಯವಾಗಿ ‘ಬ್ರಹ್ಮ ಸತ್ಯಂ, ಜಗತ್‌ ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ’ ಅಂದರೆ ಬ್ರಹ್ಮವೇ ಸತ್ಯ, ತೋರಿಕೆಯ ಜಗತ್ತು ಮಾಯೆ. ಆತ್ಮ ಬ್ರಹ್ಮನೇ ಆಗಿದ್ದಾನೆ. ಆತ್ಮ – ಬ್ರಹ್ಮ ಬೇರೆಯಲ್ಲ ಎಂಬ ಅದ್ವೈತ ದರ್ಶನವನ್ನು ನಾಡಿನ ಜನತೆಗೆ ಭೋದಿಸಿದರು, ಅವರ ಭೋಧನೆಗಳು ಇಂದಿಗು ಆಚರಣೆಯಲ್ಲಿ ಇರುವುದನ್ನು ನಾವು ಕಾಣ ಬಹುದಾಗಿದೆ. ಇವರ ಅಮೋಘವಾದ ಕಾರ್ಯಸಾಧನೆಗಳು ನಮ್ಮ ನಡುವೆ ಬಹಳ ಇದ್ದಾವೆ. ಇದಕ್ಕೆ ಒಂದು ಉದಾಹರಣೆಯೆಂದರೆ, ಭಾರತದಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ ಶ್ರೇಷ್ಠ ದಾರ್ಶನಿಕರಲ್ಲಿ ಒಬ್ಬನೆಂದೂ ಪರಿಗಣಿಸಲ್ಪಟ್ಟಿರೆ. ತಮ್ಮ ಕಾರ್ಯವು ಅಖಂಡವಾಗಿ ಸಾಗಬೇಕು ಎನ್ನುವ ಕಾರಣಕ್ಕಾಗಿ ಅವರು ಕರ್ನಾಟಕದಲ್ಲಿ ಶೃಂಗೇರಿ ಶಾರದ ಗುಜರಾತ್ ರಾಜ್ಯದ ದ್ವಾರಕದಲ್ಲಿ, ಒರಿಸ್ಸಾ ರಾಜ್ಯದ ಪೂರಿಯಲ್ಲಿ ಮತ್ತು ಉತ್ತರಾಖಾಂಡ ರಾಜ್ಯದಲ್ಲಿ ಮಠಗಳನ್ನು ಸ್ಥಾಪಿಸಿದ್ದಾರೆ. ತಮ್ಮ ಮೂವತ್ತೆರಡನೇ ವಯಸ್ಸಿನಲ್ಲಿ ಶಂಕರಾಚಾರ್ಯರು ಹಿಮಾಲಯದ ಕೇದಾರನಾಥಕ್ಕೆ ಹೋಗಿ, ಬ್ರಹ್ಮನಲ್ಲಿ ವಿಲೀನವಾದರು.

- Advertisement -
spot_img

Latest News

error: Content is protected !!