- Advertisement -
- Advertisement -
ವಿಟ್ಲ: ತರಕಾರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ನಗದು ಹಾಗೂ ವಸ್ತುಗಳು ಸಂಪೂರ್ಣವಾಗಿ ಧ್ವಂಸಗೊಂಡ ಘಟನೆ ವಿಟ್ಲದ ನಾಲ್ಕು ಮಾರ್ಗದಲ್ಲಿ ಸಂಭವಿಸಿದೆ.
ವಿಟ್ಲದ ಮಂಗಳೂರು ರಸ್ತೆಯಲ್ಲಿರುವ ಬಿ.ಕೆ ತರಕಾರಿ ಅಂಗಡಿಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೆ ವಿಟ್ಲ ಪೊಲೀಸರು ಆಗಮಿಸಿ ಅಂಗಡಿ ಬೀಗ ಮುರಿದು ವಸ್ತುಗಳನ್ನು ಹೊರ ಹಾಕಿದ್ದಾರೆ. ಪಕ್ಕದಲ್ಲಿರುವ ಬೇಕರಿ ಅಂಗಡಿಗೂ ಬೆಂಕಿ ಆವರಿಸಿದೆ. ತರಕಾರಿ ಅಂಗಡಿ ಯಲ್ಲಿದ್ದ ನಗದು ಹಾಗೂ ತರಕಾರಿ, ಇನ್ನಿತರ ಸಾಮಗ್ರಿ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ.
- Advertisement -