Wednesday, September 18, 2024
HomeUncategorizedಬೆಂಗಳೂರು: ರಸ್ತೆಯಲ್ಲೇ ಯುವತಿ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ

ಬೆಂಗಳೂರು: ರಸ್ತೆಯಲ್ಲೇ ಯುವತಿ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ

spot_img
- Advertisement -
- Advertisement -

ಬೆಂಗಳೂರು: ತರಕಾರಿ ತರಲು ಹೋದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಸ್ಥಳೀಯರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 20 ವರ್ಷದ ವಿದ್ಯಾರ್ಥಿನಿ ಏಪ್ರಿಲ್ 25ರಂದು ತರಕಾರಿ ತರಲು ಓಬಯ್ಯ ಲೇನ್ 1 ನೇ ಕ್ರಾಸ್ ಕಿರಿದಾದ ರಸ್ತೆಯಲ್ಲಿ ಹೋಗುವಾಗ 21 ವರ್ಷದ ಮಹಮದ್ ಫಯಾಜ್ ಅಡ್ಡಗಟ್ಟಿ ವಿದ್ಯಾರ್ಥಿನಿಯ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ.

ಈ ವೇಳೆ ವಿದ್ಯಾರ್ಥಿನಿ ಕಿರುಚಾಡಿ ಆರೋಪಿಯನ್ನು ಹಿಡಿದು ಮುಖ್ಯರಸ್ತೆಗೆ ಎಳೆದುಕೊಂಡು ಬಂದಿದ್ದಾಳೆ. ವಿದ್ಯಾರ್ಥಿನಿಯ ಕೈ’ಕಚ್ಚಿದ ಆರೋಪಿ ಪರಾರಿಯಾಗಲು ಯತ್ನಿಸಿದ್ದು, ಧಾವಿಸಿ ಬಂದು ಆರೋಪಿಯನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಹಿಂದೆ ಬಾಲಾಪರಾಧಿಯಾಗಿ ಆರೋಪಿ ಜೈಲು ಸೇರಿದ್ದ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!