Tuesday, September 17, 2024
Homeಕರಾವಳಿತಣ್ಣೀರುಪಂತ: ಹಿರಿಯ ಸಂಘಟನಾ ಚತುರ ಉಂಡೆಮನೆ ನಾರಾಯಣ ಭಟ್ ನಿಧನ

ತಣ್ಣೀರುಪಂತ: ಹಿರಿಯ ಸಂಘಟನಾ ಚತುರ ಉಂಡೆಮನೆ ನಾರಾಯಣ ಭಟ್ ನಿಧನ

spot_img
- Advertisement -
- Advertisement -

ಉರುವಾಲು: ಉರುವಾಲು ಗ್ರಾಮದ ನಿವಾಸಿ ಉಂಡೆಮನೆ ನಾರಾಯಣ ಭಟ್(73ವ) ಅವರು ಅಲ್ಪಕಾಲದ ಅಸೌಖ್ಯದಿಂದ ಬಳಲಿ ಇಂದು ನಿಧನರಾದರು.

ಜನಸಂಘದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಇವರು, ಕಣಿಯೂರು ಗ್ರಾ.ಪಂ ಸದಸ್ಯರಾಗಿ ಎರಡು ಅವಧಿಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದರು. ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಎರಡು ಅವಧಿಗೆ ಮಾಜಿ ಅಧ್ಯಕ್ಷರಾಗಿ, ಹಾಲಿ ನಿರ್ದೇಶಕರಾಗಿ ಸಂಘದ ಶ್ರೇಯೋಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದ್ದರು.

ಸಮಾಜ ಸೇವೆಗೆ ತನ್ನ ಜೀವನ ಮುಡಿಪಾಗಿಟ್ಟರು. ನಮ್ಮೂರಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ಅದು ತನ್ನ ಮನೆಯ ಸಮಸ್ಯೆ ಎಂದು ಪಕ್ಷಾತೀತವಾಗಿ ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ಸುಮಾರು 10 ವರ್ಷಗಳ ಹಿಂದೆ ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದ ಸಂದರ್ಭದಲ್ಲಿ ಜನರನ್ನು ಸಂಘಟಿಸಿ, ಹೋರಾಟ ಸಮಿತಿಯನ್ನು ರಚಿಸಿ, ಅದರ ಅಧ್ಯಕ್ಷರಾಗಿ ಪ್ರತಿಭಟನೆಯನ್ನು ನಡೆಸಿ, ಸರಕಾರದ ಗಮನವನ್ನು ಸೆಳೆದಿದ್ದರು.

ನವಚೇತನ ತೋಟಗಾರಿಕಾ ಉತ್ಪನ್ನಗಳ ಕಂಪೆನಿಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ತಮ್ಮ ಕುಟುಂಬದ ವತಿಯಿಂದ ಸಮಾಜದಲ್ಲಿ ವಿಶೇಷ ಸೇವೆ ಸಲ್ಲಿಸುವವರನ್ನು ಗುರುತಿಸಿ, ಗೌರವಿಸುವ ನಿಟ್ಟಿನಲ್ಲಿ `ಉಂಡೆ ಮನೆ ಪ್ರಶಸ್ತಿ’ಯನ್ನು ಸ್ಥಾಪಿಸಿ ಪ್ರತಿವರ್ಷ ಒಬ್ಬರನ್ನು ಗೌರವಿಸುತ್ತಾ ಬರುತ್ತಿದ್ದರು.ನಾರಾಯಣ ಭಟ್ಟರ ತಂದೆ ಅಧ್ಯಾಪಕರಾಗಿದ್ದರು ಅವರ ನೆನಪಿಗೋಸ್ಕರ *ಉಂಡೆಮನೆ ಪ್ರಶಸ್ತಿ* ಹುಟ್ಟುಹಾಕಲಾಯಿತು.

ಗುರುವಾಯನಕೆರೆ ಹವ್ಯಕ ಭವನದಲ್ಲೂ ಸಕ್ರೀಯವಾಗಿ ತೊಡಗಿಸಿಕೊಂಡಿದ್ದ ಅವರು ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಮುಂಚೂಣಿಯ ಪಾತ್ರವಹಿಸಿದ್ದರು. ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿದ್ದಾರೆ.

ಮೃತರು ಪತ್ನಿ ಪಾರ್ವತಿ ಹಾಗೂ ಸಹೋದರರು, ಸಹೋದರಿಯರು ಕುಟುಂಬಸ್ಥರು, ಬಂಧು-ವರ್ಗದವರನ್ನು ಆಗಲಿದ್ದಾರೆ.

- Advertisement -
spot_img

Latest News

error: Content is protected !!