Monday, June 8, 2026
Homeಕರಾವಳಿಮಂಗಳೂರು: ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿ ವಂಚಿಸಿದ ಆರೋಪಿಯ ಬಂಧನ

ಮಂಗಳೂರು: ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿ ವಂಚಿಸಿದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ಮಹಿಳೆಯ ಧ್ವನಿಯಲ್ಲಿ ಕರೆ ಮಾಡಿ ವಂಚಿಸಿದ ಆರೋಪಿಯನ್ನು ಬಂಧಿಸಿದ ಘಟನೆ ಸುರತ್ಕಲ್‌ ನಲ್ಲಿ ಬಂಧಿಸಿದ್ದಾರೆ. ಮೂಡಬಿದಿರೆ ಸಮೀಪದ ಬಿರಾವು ಧನಂಜಯ ಬಂಧಿತ ಆರೋಪಿ .

ಬೈಕಂಪಾಡಿಯ ಕಂಪೆನಿಯೊಂದರ ಉದ್ಯೋಗಿ ಹೊಸಬೆಟ್ಟು ನಿವಾಸಿಯೋರ್ವರಿಗೆ ಉಷಾ ಎಂದು ಪರಿಚಯಿಸಿಕೊಂಡು ಹೆಣ್ಣಿನ ಸ್ವರದಲ್ಲಿ ಕರೆವೀಡಿಯೋ ಕಾಲ್‌ ಮಾಡಿ, ಯಾವುದೋ ಹುಡುಗಿಯ ಖಾಸಗಿ ಅಂಗಗಳನ್ನು ತೋರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪ ಈತನ ಮೇಲಿದೆ.

 ಆರೋಪಿ ಬಿರಾವು ಧನಂಜಯವು, ಹೊಸಬೆಟ್ಟು ನಿವಾಸಿಗೆ ಕರೆ ಮಾಡಿ 25 ಸಾವಿರ ಹಣ ಕೊಡಬೇಕು, ಇಲ್ಲವಾದಲ್ಲಿ ಈ ವೀಡಿಯೋ ಕ್ಲಿಪ್ಪಿಂಗನ್ನು ಬೇರೆಯವರಿಗೆ ಕಳುಹಿಸುವುದಾಗಿ ಬೆದರಿಸಿದ್ದ. ಕಂಗಾಲಾಗಿ ಸಂತ್ರಸ್ತರು ಒಮ್ಮೆ 2 ಸಾವಿರ ಗೂಗಲ್‌ ಪೇ ಮಾಡಿದ್ದರು. ಬಳಿಕವೂ  ಪದೇಪದೇ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಕೊನೆಗೆ ಸುರತ್ಕಲ್‌ ಠಾಣೆಗೆ ದೂರು ನೀಡಿದ್ದಾರೆ. ಸುರತ್ಕಲ್‌ ಪೊಲೀಸರು  ಧನಂಜಯನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ

- Advertisement -

Latest News

error: Content is protected !!