Monday, April 29, 2024
Homeಉದ್ಯಮತುಳುವರ ಬಾವುಟಕ್ಕೆ ಅವಮಾನಿಸಿ ಚಪ್ಪಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಬಂಧನ

ತುಳುವರ ಬಾವುಟಕ್ಕೆ ಅವಮಾನಿಸಿ ಚಪ್ಪಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯ ಬಂಧನ

spot_img
- Advertisement -
- Advertisement -

ಮಂಗಳೂರು: ತುಳುನಾಡಿನ ಬಾವುಟವನ್ನು ಚಪ್ಪಲಿಯ ಬಣ್ಣಕ್ಕೆ ಹೊಂದಿಕೆಯಾಗುವಂತೆ ಎಡಿಟ್ ಮಾಡಿ, ಫೇಸ್ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣದಲ್ಲಿ ಬರ್ಕೆ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಸೂರ್ಯ ಎನ್.ಕೆ. (19) ಬಂಧಿತ ಆರೋಪಿ. ತುಳುನಾಡಿನ ಬಾವುಟವನ್ನು ಎಡಿಟ್ ಮಾಡಿ, ತನ್ನ ಫೇಸ್ಬುಕ್ ನಲ್ಲಿ ಹಾಕಿದ್ದಲ್ಲದೆ ಅಶ್ಲೀಲವಾಗಿ ಕಮೆಂಟ್ ಹಾಕಿದ್ದ. ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಶಶಿಧರ ಹೆಗ್ಡೆ ಪೊಲೀಸರಿಗೆ ದೂರು ನೀಡಿದ್ದರು.ಬರ್ಕೆ ಠಾಣೆಯಲ್ಲಿ ಈ ಬಗ್ಗೆ ಪೊಲೀಸರು 153(ಎ) ಮತ್ತು 505 (2) ಐಪಿಸಿ ಅಡಿ ಪ್ರಕರಣ ದಾಖಲಿಸಿದ್ದರು. ಆರೋಪಿಯ ಪತ್ತೆಗಾಗಿ ಬರ್ಕೆ ಠಾಣೆ ಎಸ್ಐ ಹಾರುಣ್ ಅಖ್ತರ್ ನೇತೃತ್ವದಲ್ಲಿ ಉರ್ವಾ ಪೊಲೀಸ್ ಠಾಣೆ ಸಿಬಂದಿ ಪುಷ್ಪರಾಜ್, ಪ್ರಕಾಶ್, ಬರ್ಕೆ ಠಾಣೆಯ ಶರತ್ ಎಂಬವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಗಿತ್ತು.

ಪೊಲೀಸ್ ತಂಡ ಬೆಂಗಳೂರಿಗೆ ತೆರಳಿ, ಆರೋಪಿಯ ಮನೆಯನ್ನು ಪತ್ತೆ ಮಾಡಿದೆ. ಆರೋಪಿ ಸೂರ್ಯ ಎನ್.ಕೆ. ಶ್ರೀರಾಂಪುರದಲ್ಲಿ ಒಂದನೇ ಕ್ರಾಸ್ ನಿವಾಸಿಯಾಗಿದ್ದನ್ನು ಪತ್ತೆ ಮಾಡಿ, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿಯನ್ನು ಇಂದು ಮಂಗಳೂರಿಗೆ ಕರೆತಂದು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.ತುಳುವರು ಕಳೆದ ಭಾನುವಾರ ಟ್ವಿಟರ್ ನಲ್ಲಿ ಅಭಿಯಾನ ನಡೆಸಿದ್ದು, ತುಳು ಭಾಷೆಗೆ ರಾಜ್ಯಭಾಷೆಯ ಮಾನ್ಯತೆ ನೀಡುವಂತೆ ಒತ್ತಾಯ ಮಾಡಿದ್ದರು. ಈ ವೇಳೆ, ಸಾಮಾಜಿಕ ಜಾಲತಾಣದಲ್ಲಿ ತುಳು ಟ್ವೀಟ್ ಭಾರೀ ಟ್ರೆಂಡ್ ಆಗಿತ್ತು. ಇದೇ ವೇಳೆ, ಸೂರ್ಯ ತುಳುವರನ್ನು ಕೆರಳಿಸುವುದಕ್ಕಾಗಿ ತುಳು ಬಾವುಟವನ್ನು ಚಪ್ಪಲಿಗೆ ಹೊಂದಿಸಿ, ಪೋಸ್ಟ್ ಮಾಡಿದ್ದಲ್ಲದೆ, ಇವತ್ತು ತುಳುನಾಡ್ ಚಪ್ಪಲಿ ಬಂದಿದೆ, ನಾಳೆ ಬಿಕಿನಿಯೂ ಬರಬಹುದು, ಹಾಕಿಕೊಂಡು ಮಜಾ ಮಾಡಿ ಎಂದು ಬರೆದು ತುಳು ಭಾಷಿಕರ ಭಾವನೆಗೆ ಘಾಸಿಗೊಳಿಸುವ ಕೆಲಸ ಮಾಡಿದ್ದ. ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!