Saturday, June 13, 2026
Homeಕರಾವಳಿಉಡುಪಿಉಡುಪಿ; ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯ ಮೀಟಿಂಗ್‌ ರೂಮ್‌ ಬೆಂಕಿಗಾಹುತಿ

ಉಡುಪಿ; ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯ ಮೀಟಿಂಗ್‌ ರೂಮ್‌ ಬೆಂಕಿಗಾಹುತಿ

- Advertisement -
- Advertisement -

ಉಡುಪಿ; ಮಲ್ಪೆ ಮೀನುಗಾರಿಕೆ ಇಲಾಖೆಯ ಕಚೇರಿಯ ಮೀಟಿಂಗ್‌ ರೂಮ್‌ ಬೆಂಕಿಗಾಹುತಿಯಾಗಿದೆ.ಬೆಳಗ್ಗೆ ಕಚೇರಿ ತೆರೆದಾಗಲೇ ಘಟನೆ ಬೆಳಕಿಗೆ ಬಂದಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದಾರೆ. ರೂಮ್‌ನೊಳಗಿದ್ದ ಹವಾನಿಯಂತ್ರಕ ಯಂತ್ರ ಸ್ಫೋಟಗೊಂಡಿದ್ದು, ರೂಮ್‌ನ ಒಳಗಿದ್ದ ಎಲ್ಲ ಕಡತಗಳು ಸುಟ್ಟು ಬೂದಿಯಾಗಿವೆ.

ಫ್ಯಾನ್‌, ಚೆಯರ್‌, ಟೇಬಲ್‌, ಲೈಫ್‌ಬಾಯ್‌, ಲೈಫ್ ಜ್ಯಾಕೆಟ್‌, ಸೇರಿದಂತೆ ಪಾರ್ಟಿಶನ್‌ ಗೋಡೆ ಸಂಪೂರ್ಣ ಹಾನಿಯಾಗಿದೆ. ಬೆಂಕಿ ಇತರ ಕೋಣೆಯನ್ನು ಆವರಿಸಿದರೆ ಈ ಕಟ್ಟಡ ಪೂರ್ತಿ ಬೆಂಕಿಗಾಹುತಿಯಾಗುತ್ತಿತ್ತು ಎನ್ನಲಾಗಿದೆ.

 ಸುಮಾರು 4 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

- Advertisement -

Latest News

error: Content is protected !!