- Advertisement -
- Advertisement -
ಮಂಗಳೂರು: ಕರಾವಳಿಯ ಖ್ಯಾತ ನೃತ್ಯ ಗುರು ನಾಟ್ಯಾಲಯ ಸಂಸ್ಥೆಯ ನಿರ್ದೇಶಕಿ ಕಮಲಾಭಟ್ (70) ಅವರು ವಿಧಿವಶರಾಗಿದ್ದಾರೆ.
ಕಮಲಾಭಟ್ ರವರು ನಾಟ್ಯಾಲಯ ಉರ್ವ ಸಂಸ್ಥೆಯನ್ನು 45 ವರ್ಷಗಳಿಂದ ಕಟ್ಟಿ ಬೆಳೆಸಿದ್ದರು. ಮಾತ್ರವಲ್ಲದೆ ರಾಜ್ಯ, ದೇಶ ಹಾಗೂ ಹೊರದೇಶಗಳಲ್ಲೂ ನೃತ್ಯ ಶಿಕ್ಷಕರಾಗಿ, ಕಲಾವಿದೆಯಾಗಿ ಮಿಂಚಿ ಅನೇಕ ಶಿಷ್ಯರನ್ನು ನಾಟ್ಯರಂಗಕ್ಕೆ ನೀಡಿದ್ದರು.
ಕಮಲಾ ಭಟ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ಶ್ರೀ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಉಡುಪಿ ಪೇಜಾವರ ಮಠದ ಪ್ರಶಸ್ತಿ, ಇನ್ನು ಅನೇಕ ಪ್ರಶಸ್ತಿಗಳು ಲಭಿಸಿವೆ.ತಮ್ಮ ಸಂಸ್ಥೆಯಿಂದ ರಾಜ್ಯದ ಪ್ರತಿಷ್ಠಿತ ವೇದಿಕೆಗಳಲ್ಲಿ ಸಾವಿರಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದರು
- Advertisement -