Friday, June 5, 2026
Homeಕರಾವಳಿಉಡುಪಿಅಮೇರಿಕದಲ್ಲಿ ಕುಂದಾಪುರದ ಕಕ್ಕುಂಜೆ ಹುಡುಗಿಯ ಛಾಪು- ಜಿಲ್‌ ಬೈಡನ್‌ ನೀತಿ ನಿರ್ದೇಶಕರಾಗಿ ಮಾಲಾ ಅಡಿಗ!..

ಅಮೇರಿಕದಲ್ಲಿ ಕುಂದಾಪುರದ ಕಕ್ಕುಂಜೆ ಹುಡುಗಿಯ ಛಾಪು- ಜಿಲ್‌ ಬೈಡನ್‌ ನೀತಿ ನಿರ್ದೇಶಕರಾಗಿ ಮಾಲಾ ಅಡಿಗ!..

- Advertisement -
- Advertisement -

ಉಡು​ಪಿ: ಅಮೇರಿಕದಲ್ಲಿ ಭಾರತೀಯ ಮೂಲದ ಹಲವರು ಉನ್ನತ ಹುದ್ದೆಗೇರಿದ್ದಾರೆ. ಈಗ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡನ್‌ ಅವರ ಪತ್ನಿ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕರಾಗಿ ಭಾರತೀಯ ಮೂಲದ ಮಾಲಾ ಅಡಿಗ ಅವರು ಆಯ್ಕೆಯಾಗಿದ್ದಾರೆ. ಇದು ಭಾರತೀಯರಿಗೆ ಖುಷಿಕೊಟ್ಟಿದೆ. ಮಾಲಾ ಅಡಿಗ ಉಡುಪಿ ಜಿಲ್ಲೆಯ ಕುಂದಾಪುರದ ಕಕ್ಕುಂಜೆ ಮೂಲದವರುರು ಹುಟ್ಟಿಬೆಳೆದದ್ದು, ಅಮೆರಿಕದಲ್ಲಿ. ಡಾ.ರಮೇಶ್‌ ಅಡಿಗರ ಮಗಳು.ಈಕೆಯ ಈ ಸಾಧನೆ ಕರಾವಳಿ ಮಂದಿಗೆ ಸಂತಸ ತಂದಿದೆ.

ಮಾಲಾ ಬೈಡನ್‌ ಫೌಂಡೇಶನ್‌ನಲ್ಲಿ ಉನ್ನತ ಶಿಕ್ಷಣ ನಿರ್ದೇಶಕಿಯಾಗಿ, ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ, ಅಮೆರಿಕಾದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರೀಸ್‌ ಅವರಿಗೆ ಸಲಹೆಗಾರರಾಗಿದ್ದರು. ಮಾಲಾ ಅಡಿಗ ಕಾನೂನು ಪದವಿಧರೆಯಾಗಿದ್ದು ಅಮೆರಿಕದ ಇಲಿನಾಯ್ಸ ನಿವಾಸಿ. ಈಕೆ ಅಮೆರಿಕಾದ ಪ್ರಥಮ ಮಹಿಳಾ ನೀತಿ ನಿರ್ದೇಶಕಿಯಾಗಿದ್ದಾರೆ.

- Advertisement -

Latest News

error: Content is protected !!