ಬೆಂಗಳೂರು: ತಮ್ಮ ಪ್ರಖರ ಮತುಗಳು, ದಿಟ್ಟ ಸಾಮಾಜಿಕ, ಜನಪರ ಕಾಳಜಿಯ ಮೂಲಕ ರಾಜ್ಯದ ಜನಸಾಮಾನ್ಯರ ಕಣ್ಮಣಿಯಾಗಿದ್ದ ಮಹೇಂದ್ರ ಕುಮಾರ್ ನಿಧನರಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ
ಬಜರಂಗದಳದ ರಾಜ್ಯ ಸಂಚಾಲಕರಾಗಿದ್ದ ಅವರು ಅದರಿಂದ ಹೊರಬಂದ ಬಳಿಕ ಸಂಘ ಪರಿವಾರದ ಕಟು ಟೀಕಾಕಾರರಾಗಿ ಸಾಮಾಜಿಕ, ಜಾಗೃತಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದರು. ಬಜರಂಗದಳದ ಸಂಚಾಲಕರಾಗಿದ್ದ ಮಹೇಂದ್ರಕುಮಾರ್ ನಂತರದಲ್ಲಿ ಬಜರಂಗದಳ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿದ್ದರು.
ಮೂಲತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾದ ಅವರು ಈಗ ಬೆಂಗಳೂರು ನಿವಾಸಿಯಾಗಿದ್ದರು. ಮಹೇಂದ್ರ ಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ನಮ್ಮ ಧ್ವನಿ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ವಿಷಯಗಳ ಬಗ್ಗೆ ಮಾತನಾಡಿ ಜನಪ್ರಿಯರಾಗಿದ್ದ ಅವರು ಕೇಂದ್ರ ಸರಕಾರದ ಸಿಎಎ ಕಾಯ್ದೆ ವಿರುದ್ಧವೂ ಹಲವು ಪ್ರತಿಭಟನಾ ಸಮಾವೇಶಗಳಲ್ಲಿ ಮಾತನಾಡಿದ್ದರು.
ಮಹೇಂದ್ರ ಕುಮಾರ್ ಕಡೆಯದಾಗಿ ಮಾಡಿರುವ ಫೇಸ್ ಬುಕ್ ಪೋಸ್ಟ್